This is the title of the web page
This is the title of the web page
State NewsVideo News

ಕಳ್ಳರ ಕಾಟಕ್ಕೆ ಬೇಸತ್ತು ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸಿದ ರೈತ..


K2kannadanews.in

ರಾಯಚೂರು : ಬರಗಾಲ (drought) ಬಂತೆದಂರೆ ಸಾಕು ಕಳ್ಳತನ (Thieves) ಪ್ರಕರಣಗಳು ಹೆಚ್ಚಾಗುತ್ತವೆ.‌‌ ಪ್ರಸ್ತುತ ಬರಗಾಲದಲ್ಲಿ ಬರಗಾಲ ಹೊಸ ರೀತಿಯ (New type) ಕಳ್ಳತನಕ್ಕೆ ನಾಂದಿ ಹಾಡಿದ್ದಾರೆ ಕಳ್ಳರು. ಕಳ್ಳರ ಕೈಚಳಕದಿಂದ ರೈತರಿಗೆ (Farmer’s) ತಮ್ಮ ಬೆಳೆಗಳನ್ನ (crops) ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ (Big question). ಹೀಗಾಗಿ ಇಲ್ಲೊಬ್ಬ ರೈತ ಜಮೀನಿಗೆ ಸಿಸಿ ಕ್ಯಾಮೆರಾ (CC Camera) ಅಳವಡಿಸಿದ್ದಾನೆ ಬೆಳೆಗಳ ರಕ್ಷಣೆಗೆ ಮುಂದಾಗಿದ್ದಾನೆ.

ಮಳೆ ಕೊರತೆಯಿಂದಾಗಿ (Lack of rain) ರೈತನ ಪರಸ್ಥಿತಿ ಕೇಳತೀರದಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಣಸಿನಕಾಯಿ (chilly) ಬೆಳೆದಿರುವ ರಾಯಚೂರು ಜಿಲ್ಲೆಯ ರೈತರಿಗೆ ಕಳ್ಳರ ಕಾಟ ಶುರುವಾಗಿದೆ. ಈ ಮೊದಲು ಹತ್ತಿ (cotton), ತೊಗರಿ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಮೆಣಸಿನಕಾಯಿಗೂ ಲಗ್ಗೆ ಇಟ್ಟಿದ್ದಾರೆ. ಜಮೀನಿನಲ್ಲಿನ ಬೆಳೆಯನ್ನ ಗಿಡಸಹಿತ ಕಳ್ಳತನ ಮಾಡಿದರೆ, ಈಗಾಗಲೇ ಬಿಡಿಸಿ ಒಣಗಲು ಹಾಕಿದ ಮೆಣಸಿನಕಾಯಿಯನ್ನ ಕಾಯುವುದೇ ರೈತನಿಗೆ ಕಷ್ಟದ ಕೆಲಸವಾಗಿದೆ.

 

ಹೀಗಾಗಿ ಲಿಂಗಸುಗೂರು ತಾಲೂಕಿನ ಮೇದಿನಾಪುರ ಗ್ರಾಮದ ರೈತ ಶರಣಬಸವ ತನ್ನ ಜಮೀನಿಗೆ ಸಿಸಿ ಕ್ಯಾಮೆರಾವನ್ನೇ ಅಳವಡಿಸಿದ್ದಾನೆ. ಮೊಬೈಲ್‌ ನಲ್ಲಿ ಸಾಫ್ಟ್‌ವೇರ್ ಹಾಕಿಕೊಂಡು ಇದ್ದ ಜಾಗದಿಂದಲೇ ಜಮೀನನ್ನ ವೀಕ್ಷಣೆ ಮಾಡುತ್ತಿದ್ದಾನೆ. ಆದ್ರೂ ಕಳ್ಳರ ಭಯ ಇರುವುದರಿಂದ ರಾತ್ರಿ ಹೊತ್ತು ಜಮೀನಿನಲ್ಲೇ ಮಲಗುತ್ತಾರೆ. 3 ಎಕರೆಗೆ ಮೂರುವರೆ ಲಕ್ಷ ರೂಪಾಯಿ ಖರ್ಚುಮಾಡಿ ಬೆಳೆದಿದ್ದು ಈಗ ಬೆಳೆ ಉಳಿಸಿಕೊಳ್ಳಲು 13 ಸಾವಿರ ರೂಪಾಯಿ ಖರ್ಚು ಮಾಡಿ ಸಿಸಿ ಕ್ಯಾಮೆರಾ ಮೊರೆ ಹೋಗಿದ್ದಾನೆ. 30 ಮೀಟರ್ ವ್ಯಾಪ್ತಿಯಲ್ಲಿ ಯಾರೇ ಜಮೀನಿಗೆ ಕಾಲಿಟ್ಟರು ಬೀಪ್ ಸೌಂಡ್ ಬರುವುದರಿಂದ ಕಳ್ಳರ ಜೊತೆ ಕಾಡುಪ್ರಾಣಿಗಳಿಂದಲೂ ರಕ್ಷಣೆಯ ನೀರಿಕ್ಷೆಯನ್ನ ರೈತ ಹೊಂದಿದ್ದಾನೆ.


[ays_poll id=3]