This is the title of the web page
This is the title of the web page
Crime NewsLocal NewsVideo News

ದೇವಸ್ಥಾನ ಕಳ್ಳತನಕ್ಕೆ ಯತ್ನಸಿ ಸಿಕ್ಕಿಬಿದ್ದ ಕಳ್ಳ : ಮುಂದಾಗಿದ್ದೇ ಬೇರೆ..?


K2kannadanews.in

Temple Thief ದೇವದುರ್ಗ : ಕಪಗಲ್ ಗ್ರಾಮದ ಮೂವರು ಖದಿಮರು ದೇವಸ್ಥನದಲ್ಲಿ ( temple) ಕಳ್ಳತನಕ್ಕೆ ಯತ್ನಿಸುತ್ತಿದ್ದ (Try) ವೇಳೆ ಓರ್ವ ಕಳ್ಳ ಗ್ರಾಮಸ್ಥರ ಕೈಗೆ‌ಸಿಕ್ಕಿದ್ದು, ಆತನನ್ನು ರಾತ್ರಿಯಿಡೀ (whole night) ಕಂಬಕ್ಕೆ (pole) ಕಟ್ಟಿ ಥಳಿಸಿದ ಘಟನೆ ನಾಗೋಲಿ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ನಾಗೋಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ದ್ಯಾವಮ್ಮ ದೇವಿ, ಬೀರಲಿಂಗೇಶ್ವರ (beeralingeshwar) ಮತ್ತು ಬಸವೇಶ್ವರ (basaveshwara) ದೇವಸ್ಥಾನದಲ್ಲಿ ಪ್ರತ್ಯೇಕವಾಗಿ ಕಳ್ಳತನ ಮಾಡಿ ಪರಾರಿಯಾಗುವ (Trying escape) ವೇಳೆ ಕಳ್ಳನನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ದ್ಯಾವಮ್ಮ ದೇವಿ ದೇವಸ್ಥಾನದ ಆಭರಣಗಳನ್ನು ಕಳ್ಳತನ ಮಾಡುವ ವೇಳೆ ಹುಸೇನಿ (huseni b35) ಎಂಬಾತನನ್ನು ಹಿಡಿದು ರಾತ್ರಿಯಿಡೀ ಕಂಬಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು ಸಾರ್ವಜನಿಕವಾಗಿ ಥಳಿಸಿದ್ದಾರೆ. ಶರಣಬಸವ (30) ಮತ್ತು ವೀರಸ್ವಾಮಿ (34) ಇಬ್ಬರು ಕಳ್ಳರು ತಪ್ಪಿಸಿಕೊಂಡಿದ್ದಾರೆ.

ಕೆಲ ಬಂಗಾರದ ಆಭರಣಗಳು ( Gold jewelry) ಊರಿನ ಹೊರವಲಯದಲ್ಲಿ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡು ನಂತರ ಗ್ರಾಮಸ್ಥರಿಗೆ ಮರಳಿ ನೀಡಿದ್ದಾರೆ. ಸುಮಾರು 4 ಲಕ್ಷಕ್ಕೂ ಅಧಿಕ ಬೆಲೆಬಾಳುವ ಆಭರಣಗಳನ್ನು ಕದ್ದು ಪರಾರಿಯಾಗಿರುವ ಕಳ್ಳರು ಬದಲಿಗೆ ನೀವೇ ದಂಡ (Fine) ಕಟ್ಟಿ ಬಿಡಿಸಿಕೊಂಡು ಹೋಗುವಂತೆ ಗ್ರಾಮಸ್ಥರು ಸಿಕ್ಕಿಬಿದ್ದ ಕಳ್ಳನ ಕುಟುಂಬಸ್ಥರಿಗೆ (Family) ಒತ್ತಾಯಿಸುತ್ತಿದ್ದಾರೆ. ದೇವದುರ್ಗ ಪೊಲೀಸ್ ಠಾಣಾ (police station) ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲಾಗಿಲ್ಲ.


[ays_poll id=3]