This is the title of the web page
This is the title of the web page
Local News

ಅಧಿಕಾರಿಗಳ ನಿರ್ಲಕ್ಷಕ್ಕೆ ರೈತರು ಪರದಾಡುವ ಪರಿಸ್ಥಿತಿ


ಮಾನವಿ : ನೈಜ ಫಲಾನುಭವಿಗಳನ್ನು ಗುರುತಿಸದೆ ಬೇಕಾಬಿಟ್ಟಿಯಾಗಿ ಮಧ್ಯವರ್ತಿಗಳ ಹಾವಳಿಗೆ ತುತ್ತಾಗಿ ಬಂಜರು ಭೂಮಿ,ಉಪ್ಪಿನ ಅಂಶ,ಕೆರೆ ಗುಡ್ಡ, ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ವಿತರಣೆ ಮಾಡಿ ರೈತರನ್ನು ಇನ್ನೂ ಬಡತನಕ್ಕೆ ತಳ್ಳುವಲ್ಲಿ ಸರ್ಕಾರದ ಅಧಿಕಾರಿಗೆ ಕಾರಣರಾಗಿದ್ದಾರೆ ದಲಿತಪರ ಸಂಘಟನೆಯ ಒಕ್ಕೂಟದ ಪ್ರಮುಖ ಪ್ರಭುರಾಜ ಕೊಡ್ಲಿ ಆಗ್ರಹಿಸಿದರು.

ತಾಲೂಕಿನ ನೀರಮಾನವಿ, ಕೊಟ್ನೇಕಲ್, ಮಲ್ಲಿನಮಡಗು,ಗವಿಗಟ್ಟ,ಚಿಕಲಪರ್ವಿ, ಗ್ರಾಮದಲ್ಲಿ ರಾಯಚೂರು ಜಿಲ್ಲಾಧಿಕಾರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ,ಭೂ ವಿಜ್ಞಾನಿ ಇಲಾಖೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೈಜ ಫಲಾನುಭವಿಗಳನ್ನು ಗುರುತಿಸದೆ ಬೇಕಾಬಿಟ್ಟಿಯಾಗಿ ಮಧ್ಯವರ್ತಿಗಳ ಹಾವಳಿಗೆ ತುತ್ತಾಗಿ ಬಂಜರು ಭೂಮಿ,ಉಪ್ಪಿನ ಅಂಶ,ಕೆರೆ ಗುಡ್ಡ, ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ವಿತರಣೆ ಮಾಡಿ ರೈತರನ್ನು ಇನ್ನೂ ಬಡತನಕ್ಕೆ ತಳ್ಳುವಲ್ಲಿ ಸರ್ಕಾರದ ಅಧಿಕಾರಿಗೆ ಕಾರಣರಾಗಿದ್ದಾರೆ ಕೂಡಲೇ ತನಖೆ ಮಾಡಿ ನೈಜ ರೈತರಿಗೆ ವಿತರಣೆ ಮಾಡಿ ಅಧಿಕಾರಿಗಳು ತನಿಖೆ ಮಾಡುವಂತೆ ಆಗ್ರಹಿಸಿ ಕಳೆದ 15 ದಿನಗಳಿಂದ ನಿತ್ಯ ನಿರಂತರವಾಗಿ ಹೋರಾಟವನ್ನು ಮಾಡಲಾಗುತ್ತಿದೆ ಎಂದು ದಲಿತಪರ ಸಂಘಟನೆಯ ಒಕ್ಕೂಟದ ಪ್ರಮುಖ ಪ್ರಭುರಾಜ ಕೊಡ್ಲಿ ಆಗ್ರಹಿಸಿದರು.

ಪಟ್ಟಣದ ಶಾಸಕರ ಭವನದ ಮುಂಭಾಗದಲ್ಲಿ ನಡೆದ ಹೋರಾಟದಲ್ಲಿ ಮಾತಾನಾಡಿದ ಅವರು ಸರ್ಕಾರದಿಂದ ರೈತರಿಗೆ ನೀಡಿದ ಬಂಜರು ಭೂಮಿಯನ್ನು ಮರಳಿ ಪಡೆದು ಕೃಷಿಗೆ ಯೋಗ್ಯವಾದ ಭೂಮಿಯನ್ನು ನೀಡಬೇಕು ಅದರಂತೆ ಲೋಕೋಪಯೋಗಿ ಇಲಾಖೆಯ ಕಳಪೆ ಕಾಮಗಾರಿಯ, ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ಉಪ ವಿಭಾಗದ ಕಳಪೆ ಕಾಮಗಾರಿ, ಸರ್ಕಾರಿ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಓದಗಿಸುವಂತೆ,ಅಕ್ರಮ ಗಣಿಗಾರಿಕೆ, ಪಟ್ಟಣದಲ್ಲಿ ಅಂಬೇಡ್ಕರ್ ಭವನ, ಜಗ ಜೀವನ್ ನಿಗಮ, ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸಬೇಕು ಮತ್ತು ಅಕ್ರಮಕ್ಕೆ ಸಹಕಾರ ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.


[ays_poll id=3]