ಪೀಠಗಳ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧವಾಗಿದೆ
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ಪೀಠಗಳ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಗದ್ಗುರುಗಳು ಸಣ್ಣ ವಯಸ್ಸಿನವರಾದರೂ, ದೊಡ್ಡ ಸಾಧನೆ ಮಾಡುವ ಶಕ್ತಿ ಅವರಿಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದು, ನಾವೆಲ್ಲರೂ ಅವರ ಜೊತೆಗೆ ನಿಲ್ಲಬೇಕಿದೆ. 500 ಕಿಮೀ ಪಾದಯಾತ್ರೆ ಮಾಡಿದರು. ಕ್ಷೇತ್ರದ ಅಭಿವೃದ್ಧಿಯಲ್ಲಿ ಕಂಬಿ ಮಂಟಪ, ಕಲ್ಯಾಣ ಮಂಟಪ ಮೊದಲ ಹೆಜ್ಜೆಯಾಗಿದೆ. ಶಾಲೆ, ಆಸ್ಪತ್ರೆ ನಿರ್ಮಾಣದ ಸಂಕಲ್ಪಕ್ಕೆ ಶ್ರೀ ಶೈಲ ಮಲ್ಲಿಕಾರ್ಜುನ ಆಶೀರ್ವಾದ ಮಾಡುತ್ತಾರೆ. ಸರ್ಕಾರ ಈಗಾಗಲೇ 5 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಮುಂದಿನ ಬಜೆಟ್ ನಲ್ಲಿ ಇನ್ನೂ ಹೆಚ್ಚಿ ನ ಅನುದಾನ ನೀಡಲಾಗುವುದು ಎಂದರು. ಎಲ್ಲಿಯೂ ಕೆಲಸ ನಿಲ್ಲದಂತೆ ಎಲ್ಲರೂ ಮನಸ್ಸು ಮಾಡಬೇಕು. ಎಲ್ಲಾ ಪೀಠಗಳಿಗೆ ಭೇಟಿ ನೀಡಲಾಗುವುದು ಎಂದರು.
ಶ್ರೀ ಕ್ಷೇತ್ರದ ಅಭಿವೃದ್ಧಿ ಯಾಗಬೇಕು : ಈ ದೇಶದಲ್ಲಿ ಅತಿ ಹೆಚ್ಚು ಭಕ್ತಿ ಚಳವಳಿಗಳಾಗಿವೆ. ಭಕ್ತಿಯ ಮಾರ್ಗದ ವಿಭಿನ್ನ ಚಳವಳಿಗಳು ಆಗಿದ್ದಾರೂ ಅಂತಿಮವಾಗಿ ಬೇಕಿರುವುದು ಮನ ಪರಿವರ್ತನೆ. ತಾಂತ್ರಿಕತೆ ಹಾಗೂ ನಾಗರಿಕತೆಯ ನಡುವಿನ ವ್ಯತ್ಯಾಸವನ್ನು ಅರಿಯಬೇಕು. ಯಾವುದಕ್ಕಾಗಿ ಹುಟ್ಟು, ಬದುಕು ಸನ್ಮಾನ ತೋರಿಸಲು ಪಂಚ ಪೀಠಾಧ್ಯಕ್ಷರು ಸಂಚಾರ ಮಾಡುತ್ತಿದ್ದಾರೆ. ಅವರ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಬದುಕಿನ ಉನ್ನತೀಕರಣ ಮಾಡಿಕೊಳ್ಳಬೇಕು. ಶ್ರೀಶೈಲ ಕ್ಷೇತ್ರಕ್ಕೆ ತನ್ನದೇ ಇತಿಹಾಸವಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಈ ಕ್ಷೇತ್ರ ಚನ್ನಮಲ್ಲಿಕಾರ್ಜುನನ ಸ್ಥಾಪಿತ ಕ್ಷೇತ್ರದಲ್ಲಿ ಧರ್ಮ ಪ್ರಚಾರ ವಾಗುತ್ತಿದ್ದು 12 ನೇ ಶತಮಾನದ ಶಿವಶರಣರ ಅನುಭಾವದ ಸಂಗಮವನ್ನು ಕಾಣುತ್ತೇವೆ. ಅಲ್ಲಮಪ್ರಭು, ಅಕ್ಕಮಹಾದೇವಿ, ದೇವರ ದಾಸೀಮಯ್ಯನ ಸಂಬಂಧವಿದೆ. ಶರಣರ ಸಂಬಂಧ, ಸ್ಥಾಪಿತ ಧರ್ಮ ಪೀಠವೂ ಇದೆ. ಇದರ ಸಮನ್ವಯ ಜನರಿಗೆ ಧರ್ಮ, ನ್ಯಾಯ, ನೀತಿಯ ಬದುಕಿನ ಇತಿಹಾಸವಿದೆ. ಈ ಕ್ಷೇತ್ರ ಅಭಿವೃದ್ಧಿ ಅತ್ಯಗತ್ಯ ಎಂದರು.
![]() |
![]() |
![]() |
![]() |
![]() |