This is the title of the web page
This is the title of the web page
Politics NewsState News

ಭೂ ಹಕ್ಕು ಕೋರಿ ಸಲ್ಲಿಸಿದ್ದ ಅರ್ಕಿಗಳಿಗೆ ಮುಕ್ತಿ ಎಂದು..? ಅಸ್ಥಿತ್ವ ಕಳೆಸುಕೊಂಡಿಂತೆ ಭೂನ್ಯಾಯ ಮಂಡಳಿ.?


K2kannadanews.in

ನ್ಯೂಸ್ ಡೆಸ್ಕ್ : ರಾಜ್ಯದಲ್ಲಿ ಅರ್ಧ ಶತಮಾನದ (half a century) ಹಿಂದೆ ಜಾರಿ(implement) ಮಾಡಲಾಗಿದ್ದ, ಊಳುವವನೆ ಭೂ ಒಡೆಯ ಯೋಜನೆ ಇಂದಿಗೂ ಸಮರ್ಪಕವಾಗಿ ಜಾರಿಯಾಗದೆ ಲಕ್ಷಾಂತರ ಅರ್ಜಿಗಳು (applications) ಭೂನ್ಯಾಯ ಮಂಡಳಿಯಲ್ಲಿ (Buard of Land Justice) ಕೊಳೆಯುತ್ತಿವೆ. ರೈತರಿಗೆ(farmarsl) ದಾಖಲೆ ಹಕ್ಕು (Right of record) ನೀಡಬೇಕಾದ ಸರಕಾರ ಜವಾಬ್ದಾರಿ ಮರೆತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತಿದೆ ಸಿಂಧನೂರಿನ ಜವಳಗೆರೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ.

ಹೌದು ಕರ್ನಾಟಕ ಸರಕಾರವು(government) 1961ರ ಸುಮಾರಿನಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿತ್ತು. ಇದು ದೇಶದಲ್ಲಿಯೇ ಕ್ರಾಂತಿಕಾರಿ(Revolutionary) ಯೋಜನೆಯಾಗಿ ರೂಪುಗೊಂಡಿತ್ತು. ಬಾಡಿಗೆದಾರರುಗಳಿಗೆ ಅಧಿಭೋಗದಾರಿಕೆ ಹಕ್ಕು ನೀಡುವುದು, ಕೃಷಿ ಭೂಮಿ(Agricultural land) ಹೊಂದುವುದಕ್ಕೆ ಮಿತಿ ನಿಗದಿಪಡಿಸುವುದು ಮತ್ತು ಭೂ ರಹಿತ (Landless) ಬಡವರಿಗೆ ಹೆಚ್ಚುವರಿ ಭೂಮಿ ವಿತರಣೆ ಕಾರ್ಯಕ್ರಮ ಅನುಷ್ಠಾನ ಮಾಡುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಆದರೆ ಕಾಯ್ದೇ ಅನ್ವಯ ಜಮೀನು ಅಳತೆ ಮಾಡಿಸಿ ರೈತರಿಗೆ ದಾಖಲೆ ಹಕ್ಕು ನೀಡಬೇಕಾದ ಸರಕಾರ ಜವಾಬ್ದಾರಿ ಮರೆತಂತಿದೆ. ಊಳುವವನೆ ಭೂ ಒಡೆಯ ಆಶಯದ ಭೂ ಸುಧಾರಣೆಯ ಗೇಣಿ ತಿದ್ದುಪಡಿ ಕಾಯ್ದೆ ಜಾರಿಗೊಂಡು ಬರೊಬ್ಬರಿ ಅರ್ಧ ಶತಮಾನವೇ ಕಳೆಯುತ್ತ ಬಂದರೂ ಇನ್ನೂ ಅನೇಕ ಅರ್ಜಿಗಳು ದಿಕ್ಕುದೆಸೆ ಇಲ್ಲದೇ ಕೊಳೆಯುತ್ತ ಬಿದ್ದಿವೆ.

ಭೂನ್ಯಾಯ ಮಂಡಳಿಯಲ್ಲಿ(Buard of Land Justice) ಲಕ್ಷಾಂತರ ಅರ್ಜಿಗಳು ಇತ್ಯರ್ಥವಾಗದೇ ರಾಶಿ ಬಿದ್ದಿವೆ. ಅದರ ಪರಿಣಾಮ ಹಲವು ಕಡೆಗಳಲ್ಲಿ ಇನ್ನೂ ಗೇಣಿಹಕ್ಕು ಭೂ ತಕರಾರು ಮುಂದುವರಿದಿದೆ ಭೂ ವ್ಯಾಜ್ಯ ಇತ್ಯರ್ಥಕ್ಕಾಗಿ ಕಾದು ಕಾದು ಬೇಸತ್ತು ಅದೆಷ್ಟೋ ಜನ ಬೇಸತ್ತು ಹೊಗಿದ್ದಾರೆ. ರಾಜ್ಯದ ಲ್ಲಿ ಮೂಲಗಳ ಪ್ರಕಾರ ಕಳದ 15 ವರ್ಷಗಳಲ್ಲಿ ರಾಜ್ಯದಲ್ಲಿ 12,730 ಪ್ರಕರಣಗಳಷ್ಟೇ ಇತ್ಯರ್ಥವಾಗಿದ್ದು, ಭೂ ನ್ಯಾಯ ಮಂಡಳಿಯಲ್ಲಿ ಬರೋಬ್ಬರಿ 4,75,801 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ರಾಜ್ಯದ ಕಂದಾಯ ಇಲಾಖೆಯ (Department of Revenue) ವಿಭಾಗವಾರು ಪ್ರಕರಣಗಳ ಸಂಖ್ಯೆ ನೋಡುವುದಾದರೆ.

ಮೈಸೂರು ಪ್ರಾದೇಶಿಕ ವಿಭಾಗ-1,23,769
ಬೆಂಗಳೂರು ವಿಭಾಗ : 86,940
ಕಲಬುರಗಿ ವಿಭಾಗ : 42,270
ಬೆಳಗಾವಿ ವಿಭಾಗದಲ್ಲಿ 2,17,082 ಇವುಗಳಲ್ಲಿ ಬೆಳಗಾವಿ ವಿಭಾಗಕ್ಕೆ ಒಳಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 73,822 ಪ್ರಕರಣಗಳು ಇತ್ಯರ್ಥಗೊಳ್ಳದೆ ಬಾಕಿ‌ಉಳಿದಿದ್ದು ಪ್ರಕರಣಗಳು ಇತ್ಯರ್ಥಗೊಂಡಿಲ್ಲ.


[ays_poll id=3]