This is the title of the web page
This is the title of the web page
Crime NewsNational News

ಬಾಲಕನ ಜೀವವನ್ನೇ ಪಡೆದ ಹುಣಸೆ ಹಣ್ಣು..?


K2kannadanews.in

Crime : ಹುಣಸೆ ಹಣ್ಣು ಬಾಲಕನನ್ನು ಬಲಿ ಪಡ್ದಿದೆ ಅಂದ್ರೆ ನೀವು ನಂಬತೀರಾ ಹೌದು ನಮ್ಮಲೇಬೇಕು. ಹುಣಸೆಹಣ್ಣು ತಿಂದು (10) ವರ್ಷದ ಬಾಲಕನೊಬ್ಬ (Boy) ಮೃತಪಟ್ಟ ಘಟನೆ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಬಿಹಾರದ (Bihar) ಮುಜಾಫರ್‌ಪುರದ ಸಕ್ರಾದ ಮಚ್ಚಿ ಗ್ರಾಮದ ರಾಜೇಶ್ ಮಹತೋ ಎನ್ನುವವರ ಪುತ್ರ ಆದರ್ಶ್‌ (10) 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಈತ ಹುಣಸೆ ಹಣ್ಣು (Tamarind fruit) ತಿನ್ನುತ್ತಿದ್ದಾಗ, ಅದರ ಜೊತೆಗೆ ಅದರ ಬೀಜವನ್ನು (Tamarind Seeds) ನುಂಗಿದ್ದಾನೆ. ಇದಾದ ನಂತರ ಆದರ್ಶ್‌ಗೆ (Ad ಉಸಿರಾಟದ ತೊಂದರೆಯಾಗಿದೆ. ಜೊತೆಗೆ ಇದ್ದಕ್ಕಿದ್ದಂತೆ ಆತನಿಗೆ ಮಾತು ಆಡಲು ಆಗದ ಪರಿಸ್ಥಿತಿಗೆ ಬಂದಿದ್ದಾನೆ.

ತಕ್ಷಣ ಆದರ್ಶ್‌ನನ್ನು ಆತನ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಆದರ್ಶನ ಪರಿಸ್ಥಿತಿ ಸುಧಾರಿಸಿಲ್ಲ. ಅದಾದ ಬಳಿಕ ಕುಟುಂಬದವರು ಮುಜಾಫರ್‌ಪುರದ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಹುಣಸೆ ಹಣ್ಣಿನ ಮಧ್ಯ ಭಾಗವು ಆದರ್ಶ್‌ನ ಶ್ವಾಸಕೋಶಕ್ಕೆ ಅಂಟಿಕೊಂಡಿದೆ ಎನ್ನುವುದನ್ನು ವೈದ್ಯರು ಸ್ಕ್ಯಾನಿಂಗ್‌ ಮೂಲಕ ದೃಢಪಡಿಸಿಕೊಂಡಿದ್ದಾರೆ. ಆದರೆ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆದರ್ಶ್‌ನನ್ನು ವೈದ್ಯರು ಪಾಟ್ನಾಗೆ ಕಳುಹಿಸಿದ್ದಾರೆ. ಆದರೆ ಆದರ್ಶ್‌ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


[ays_poll id=3]