This is the title of the web page
This is the title of the web page

archive#Sindhanoor

Local News

ಸಾಲ ಕಟ್ಟಲಾಗದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಸಿಂಧನೂರು : ತಾಲ್ಲೂಕಿನ ಗುಂಜಳ್ಳಿ ಗ್ರಾಮದ ರೈತ ನಿಂಗಪ್ಪ ಖಾಸಗಿಯವರ ಬಡ್ಡಿ ಹಣ ಕಟ್ಟದೆ ಮನ ನೊಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪತಿ ಹಾಗೂ ಆತನ ಅಣ್ಣನ ಮಕ್ಕಳು ಸೇರಿಕೊಂಡು ಅವಿಭಕ್ತ ಕುಟುಂಬದಲ್ಲಿ ಸುಮಾರು 13 ಎಕರೆ ಜಮೀನುಗಳಲ್ಲಿ ಒಕ್ಕಲುತನ ಮಾಡಿಕೊಂಡು ಹೋಗುತ್ತಿದ್ದರು. ತುರ್ವಿಹಾಳ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 1.50 ಲಕ್ಷ, ಖಾಸಗಿ ವ್ಯಕ್ತಿಗಳಿಂದ ಸುಮಾರು 10 ಲಕ್ಷ ಸಾಲವನ್ನು ಭತ್ತದ ಬೆಳೆಗಾಗಿ ಪಡೆದುಕೊಂಡಿದ್ದರು. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ಇಳುವರಿ ಕಡಿಮೆ ಬಂದು ಬ್ಯಾಂಕಿನ ಸಾಲ ಕಟ್ಟಲಾಗಲಿಲ್ಲ. ಇತ್ತ ಖಾಸಗಿಯವರ ಬಡ್ಡಿ ಹಣ ಕಟ್ಟಲು ಆಗದೆ ಮನ ನೊಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ಶಿವಮ್ಮ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
Local News

ರೈತರ ವಿವಿಧ ಬೇಡಿಕೆ ಈಡೇರಿಸಲು, ಬೆಳಗಾವಿ ವಿಕಾಸಸೌಧ ಮುತ್ತಿಗೆ

ಸಿಂಧನೂರು : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಬೆಳಗಾವಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾಧ್ಯಕ್ಷರಾದ ಹುಲಗಯ್ಯ ತಿಳಿಸಿದರು. ರೈತರ ಪಂಪ್‌ಸೇಟ್‌ಗಳಿಗೆ ಮೀಟರ್ ಅಳವಡಿಕೆ ತೆಗೆಯಬೇಕು. ಭತ್ತಕ್ಕೆ ಪ್ರೋತ್ಸಾಹ ಧನ ನೀಡಬೇಕು. ಕುಚಲ ಅಕ್ಕಿಗೆ ಒಂದು ಕ್ವಿಂಟಲ್ ಗೆ 500 ರೂ. ಸಹಾಯ ಧನ ನೀಡುವುದು ಸೇರಿದಂತೆ ರೈತರ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ಡಿಸೆಂಬರ್ 19 ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ಬೆಳಗಾವಿ ಮುತ್ತಿಗೆ ಹಾಕುವ ಕಾರ್ಯಕ್ರಮ ಕ್ಕೆ ಹೋಗಲು ಡಿ.18 ರಂದು ಸಿಂಧನೂರು ದಿಂದ ನೂರಾರು ಸಂಖ್ಯೆಯಲ್ಲಿ ರೈತರ ತೆರಳುತ್ತಿದ್ದೇವೆ ಎಂದು ಹುಲಗಯ್ಯ ತಿಳಿಸಿದರು....
Local News

ಮಾರಕ ರೋಗ ಎಚ್‌ಐವಿ ಜನ ಎಚ್ಚರಿಕೆಯಿಂದ ಇರಬೇಕು

ಸಿಂಧನೂರು : ಎಚ್‌ಐವಿ ಮಾರಕ ರೋಗವಾಗಿದ್ದು ಅದರಿಂದ ಜನ ಎಚ್ಚರಿಕೆಯಿಂದ ಇರಬೇಕು ಸ್ವಲ್ಪ ಯಾಮಾರಿದರೆ ಅಪಾಯ ಗ್ಯಾರಂಟಿ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಬಸಯ್ಯ ಜನರಿಗೆ ತಿಳಿವಳಿಕೆಯನ್ನು ನೀಡಿದರು. ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ಏರ್ಪಡಿಸಿದ್ದ. ಎಚ್‌ಐವಿ ಏಡ್ಸ್ ಕಾರ್ಯಕ್ರಮವನ್ನು ಹಲಗಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಏಡ್ಸ್ ಹೇಗೆ ಬರುತ್ತದೆ ಅದನ್ನು ತಡೆಗಟ್ಟುವ ಬಗ್ಗೆ ವಿವರವಾಗಿ ಜನರಿಗೆ ತಿಳಿಸಿದರು. ಪ್ರತಿವರ್ಷ ಡಿಸೆಂಬರ 1ರಂದು ಏಡ್ಸ್ ತಡೆಗಟ್ಟುವ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಏಡ್ಸ್ ತಡೆಗಟ್ಟುವ ಮೂಲಕ ಅಸಮಾನತೆಯನ್ನು ಹೋಗಲಾಡಿ ಸೋಣ ಎಂದು ತಾಲೂಕಾ ಕ್ಷೇತ್ರ ಆರೋಗ್ಯಾಧಿಕಾರಿ ಗೀತಾಹಿರೇಮಠ ಹೇಳಿದರು. ಕಲಾ ತಂಡದವರಿಂದ ಜಾನಪದ ಹಾಡುಗಳನ್ನು ಹಾಡುವ ಮೂಲಕ ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಿದರು....
Local News

ನನ್ನ ಅಧಿಕಾರ ಅವಧಿಯಲ್ಲಿ ಪಕ್ಷಬೇಧ ಮರೆತು ಅಭಿವೃದ್ಧಿ ಮಾಡಿದ್ದೇನೆ

ಸಿಂಧನೂರು : ವಯಸ್ಸಾದ ವೃದ್ಧರು ಅಂಗವಿಕಲರು ವಿಧವೆಯರನ್ನು ಕಛೇರಿಗೆ ಅಲೆದಾಡಿಸದೆ ಅವರು ಇರುವ ಮನೆಗಳಿಗೆ ಹೋಗಿ ಅವರಿಂದ ದಾಖಲಾತಿಗಳನ್ನು ಪಡೆದುಕೊಂಡು ಸತಾಯಿಸದೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ತಡ ಮಾಡಿದರೆ ಅನಿವಾರ್ಯವಾಗಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಬೇಕಾಗುತ್ತದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು. ನಾಡಗೌಡರ ನಡೆ ಸಾಧನೆಯ ಕಡೆ ಗ್ರಾಮ ವ್ಯಾಸ್ತವ್ಯ ಜನರ ಸಂಪರ್ಕ ಸಭೆಯ 23 ನೇ ದಿನದ ಗ್ರಾಮ ಪಂಚಾಯಿತಿ ತಾಲ್ಲೂಕಿನ ದೇವರಗುಡಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ನಾನು ಮಾಡುವ ಎಲ್ಲಾ ಸಭೆಗಳಲ್ಲಿ ಅಧಿಕಾರಿಗಳು ಕೆಲಸ ಮಾಡದೆ ಕಾಲಹರಣ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ನನಗೆ ದೂರು ನೀಡುತ್ತಿದ್ದಾರೆ. ಇನ್ನು ಮುಂದೆ ಈ ರೀತಿಯ ದೂರುಗಳು ಬಾರದ ಹಾಗೆ ಅದಿಕಾರಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಬೋಮ್ಮನಾಳ ದೇವಿಕ್ಯಾಂಪ್, ಚಿರತನಾಳ ಗೀತಾ ಕ್ಯಾಂಪ್...
1 2 3 4
Page 4 of 4