ಸಿಂಧನೂರು : ತಾಲ್ಲೂಕಿನ ಗುಂಜಳ್ಳಿ ಗ್ರಾಮದ ರೈತ ನಿಂಗಪ್ಪ ಖಾಸಗಿಯವರ ಬಡ್ಡಿ ಹಣ ಕಟ್ಟದೆ ಮನ ನೊಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪತಿ ಹಾಗೂ ಆತನ ಅಣ್ಣನ ಮಕ್ಕಳು ಸೇರಿಕೊಂಡು ಅವಿಭಕ್ತ ಕುಟುಂಬದಲ್ಲಿ ಸುಮಾರು 13 ಎಕರೆ ಜಮೀನುಗಳಲ್ಲಿ ಒಕ್ಕಲುತನ ಮಾಡಿಕೊಂಡು ಹೋಗುತ್ತಿದ್ದರು. ತುರ್ವಿಹಾಳ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 1.50 ಲಕ್ಷ, ಖಾಸಗಿ ವ್ಯಕ್ತಿಗಳಿಂದ ಸುಮಾರು 10 ಲಕ್ಷ ಸಾಲವನ್ನು ಭತ್ತದ ಬೆಳೆಗಾಗಿ ಪಡೆದುಕೊಂಡಿದ್ದರು. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ಇಳುವರಿ ಕಡಿಮೆ ಬಂದು ಬ್ಯಾಂಕಿನ ಸಾಲ ಕಟ್ಟಲಾಗಲಿಲ್ಲ.
ಇತ್ತ ಖಾಸಗಿಯವರ ಬಡ್ಡಿ ಹಣ ಕಟ್ಟಲು ಆಗದೆ ಮನ ನೊಂದು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ಶಿವಮ್ಮ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![]() |
![]() |
![]() |
![]() |
![]() |
[ays_poll id=3]