This is the title of the web page
This is the title of the web page

archive#BCM hostel

Local News

11 ತಿಂಗಳ ಸಂಬಳ ಬಾಕಿ: ಬಿಸಿಎಂ ಹಾಸ್ಟೆಲ್ ನೌಕರರಿಂದ ಪ್ರತಿಭಟನೆ

ಮಾನ್ವಿ : ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರಿ ಹಾಸ್ಟೆಲ್ ನಲ್ಲಿ ಅಡಿಗೆಯವರು, ಅಡುಗೆ ಸಹಾಯಕರು, ಮತ್ತು ರಾತ್ರಿ ಕಾವಲುಗಾರ ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ನೀಡುತ್ತಿದ್ದೇವೆ ಎಂದು ಹೇಳುತ್ತೆ. ಆದರೆ ಮಾನ್ವಿ ತಾಲೂಕಿನ ಬಿಸಿಎಂ ಇಲಾಖೆಯಲ್ಲಿ 11 ತಿಂಗಳಿಂದ ಸಂಬಳ ನೀಡದಿರುವುದಕ್ಕೆ ಕಾರ್ಮಿಕರು ನಮಗೆ ನ್ಯಾಯಬೇಕು ಎಂದು ಹೈದ್ರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಾನ್ವಿ ತಾಲೂಕಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಅಂಬವ್ವ ಕಾರ್ಮಿಕರನ್ನು ದುಡಿಸಿಕೊಂಡು ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹಾಸ್ಟೆಲ್ ನಲ್ಲಿ ಅಡುಗೆ ಮಾಡಿ ನಾವು ಬದುಕು ಸಾಗಿಸುತ್ತಿದ್ದೇವೆ. ಇದನ್ನು ಬಿಟ್ಟರೆ ನಮಗೆ ಬೇರೆ ಏನು ಗೊತ್ತಿಲ್ಲ. 11 ತಿಂಗಳಿಂದ ನಮಗೆ ಸಂಬಳ ಆಗಿರುವುದಿಲ್ಲ. ನಮ್ಮ ಕುಟುಂಬ ಹೇಗೆ ಜೀವನ ಸಾಗಿಸುವುದು? ನಮ್ಮ ಮಕ್ಕಳ ಶಿಕ್ಷಣಕ್ಕೆ...