K2 ನ್ಯೂಸ್ ಡೆಸ್ಕ್ : ಕೇಕ್ ಅಂದ್ರೆ ಮಕ್ಕಳಿಗೆ ತುಂಬಾ ಇಷ್ಟ, ಕೆಲವೊಮ್ಮೆ ವಿಶೇಷವಾದುದನ್ನು ತಿನ್ನಲು ಮನಸ್ಸು ಬಯಸುತ್ತದೆ. ಅದ್ರಲ್ಲೂ ಚಳಿಗಾಲದಲ್ಲಿ ಸಿಹಿ ತಿನ್ನುವ ಹಂಬಲ ಹೆಚ್ಚಾಗುತ್ತದೆ. ಆದರೆ ಬೇಕರಿ ವಸ್ತುಗಳನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ, ಆರೋಗ್ಯ ಕೆಡುತ್ತದೆ ಎಂಬ ಚಿಂತೆ ಕಾಡುತ್ತದೆ. ಹಾಗಾಗಿ ಬೇಕರಿಯಲ್ಲಿ ಮೈದಾದಿಂದ ತಯಾರಿಸಿದ ಕೇಕ್ ತಿನ್ನುವ ಬದಲು ಮನೆಯಲ್ಲಿಯೇ ರವಾದಿಂದ ತಯಾರಿಸಿದ ಕೇಕ್ ತಯಾರಿಸಿ ಸೇವಿಸಿ.
ಬೇಕಾಗುವ ಸಾಮಾಗ್ರಿಗಳು : 1 ಕಪ್ ರವಾ, ½ ಕಪ್ ಪುಡಿ ಸಕ್ಕರೆ, ¼ ಕಪ್ ಆಲಿವ್ ಆಯಿಲ್, ವೆನಿಲ್ಲಾ ಎಸೆನ್ಸ್ 5 ಹನಿ, 1 ಚಮಚ ಬೇಕಿಂಗ್ ಪೌಡರ್, ½ ಚಮಚ ಅಡುಗೆ ಸೋಡಾ, ½ ಕಪ್ ಮಜ್ಜಿಗೆ, ½ ಕಪ್ ಟುಟ್ಟಿ ಫ್ರುಟ್ಟಿ.
ಮಾಡುವ ವಿಧಾನ : ರವಾವನ್ನು ಫಿಲ್ಟರ್ ಮಾಡಿ ಮತ್ತು ಮಜ್ಜಿಗೆಯಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ಪುಡಿ ಸಕ್ಕರೆಯನ್ನು ಎಣ್ಣೆಯಲ್ಲಿ ಬೆರೆಸಿ, ಅದಕ್ಕೆ ವೆನಿಲ್ಲಾ ಎಸೆನ್ಸ್ ಸೇರಿಸಿ ಬಳಿಕ ಇದನ್ನು ನೆನೆಸಿಟ್ಟ ರವಾಗೆ ಸೇರಿಸಿ. ಇದಕ್ಕೆ ಟುಟ್ಟಿ ಫ್ರುಟ್ಟಿ ಮಿಕ್ಸ್ ಮಾಡಿ. ಹಿಟ್ಟು ದಪ್ಪವಾಗಿ ಕಂಡರೆ ಸ್ವಲ್ಪ ನೀರು ಸೇರಿಸಿ. ಕೊನೆಯದಾಗಿ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಸೇರಿಸಿ. ಈ ಹಿಟ್ಟನ್ನು ಎಣ್ಣೆ ಸವರಿದ ಕೇಕ್ ಪ್ಯಾನ್ ಗೆ ಸುರಿಯಿರಿ. ಇದನ್ನು 160 ಡಿಗ್ರಿಯಲ್ಲಿ ಬೇಯಿಸಿರಿ ಆಗ ಕೇಕ್ ರೆಡಿಯಾಗುತ್ತದೆ.
![]() |
![]() |
![]() |
![]() |
![]() |
[ays_poll id=3]