This is the title of the web page
This is the title of the web page
Local News

ಸರ್ಕಾರಿ ಯೋಜನೆಗಳ ಪರಿಣಾಮದ ಬಗ್ಗೆ ಸಮೀಕ್ಷೆ ಅಗತ್ಯ: ಸಿಎಂ


K2 ಪೊಲಿಟಿಕಲ್ ನ್ಯೂಸ್ : ನಮ್ಮ ಸರ್ಕಾರದ ಯೋಜನೆಗಳು ಜನರ ಸಾಮಾಜಿಕ, ಆರ್ಥಿಕ ಬದಲಾವಣೆಗೆ ಎಷ್ಟು ಕಾರಣವಾಗಿದೆ ಎನ್ನುವ ಬಗ್ಗೆ ಸಮೀಕ್ಷೆ ನಡೆಸಬೇಕು ಅದಕ್ಕಾಗಿ ವಿಶೇಷ ಆರ್ಥಿಕ ನೆರವು ನೀಡಲು ಸರ್ಕಾರ ಸಿದ್ದವಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪಿಎಚ್ ಡಿಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು. ನಮ್ಮ ಪ್ರಧಾನಿಗಳು ದೇಶದ ಅಮೃತ‌ಕಾಲದ ಬಗ್ಗೆ ಹೊಸ ಆಲೋಚನೆ ನೀಡಿದ್ದಾರೆ.‌ ಇಡೀ ವಿಶ್ವವೇ ನಮ್ಮನ್ನು ಗೌರವದಿಂದ ನೋಡುವ ಕಾಲ ಬಂದಿದೆ. ಪ್ರಧಾನಿಗಳು ತಳ ಹಂತದ ಬಗ್ಗೆ ಯೋಚನೆ ಮಾಡುತ್ತಾರೆ. ಪ್ರಧಾನಿಗಳ ಐದು ಲಕ್ಷ ಟ್ರಿಲಿಯನ್ ಡಾಲರ್ ಕನಸಿಗೆ ರಾಜ್ಯ ಒಂದು ಲಕ್ಷ ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಗುರಿ ನಮ್ಮದು. ರಾಜ್ಯದ ಆದಾಯ ಹೆಚ್ಚಳದಿಂದ ಸಾಮಾನ್ಯ ಜನರ ಜೀವನದಲ್ಲಿ ಎಷ್ಟು ಬದಲಾವಣೆ ಅಯಿತು ಎನ್ನುವ ಬಗ್ಗೆ ವರದಿ ನೀಡಿದರೆ ಉಪಯೋಗವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪರಿಹಾರದ ಬಗ್ಗೆ ಚಿಂತನೆ‌: ಪ್ರೊ. ರಾವ್ ಅವರು 60 ರ ದಶಕದಲ್ಲಿಯೇ ಸಾಮಾಜಿಕ ಸವಾಲುಗಳ ಬಗ್ಗೆ ಚಿಂತನೆ ಮಾಡಿ ಈ ಸಂಸ್ಥೆಯನ್ನು ಕಟ್ಟಿದರು. ಮನುಷ್ಯ ಬದಲಾದರೂ , ಮೌಲ್ಯಗಳು ಶಾಶ್ವತವಾಗಿರುತ್ತವೆ‌.
ಮನುಷ್ಯ ಬೆಳೆದಂತೆ ಬದಲಾಗುತ್ತಾ ಹೋಗುತ್ತಾನೆ. ನಾಗರಿಕತೆ ಹೆಚ್ಚಾಗುತ್ತಿರುವಂತೆ ಸಾಂಸ್ಕೃತಿಕ ಮೌಲ್ಯಗಳು ಕಡಿಮೆಯಾಗುತ್ತವೆ.
ಗೊಂದಲಗಳು ಯಾವಾಗಲೂ ಇರುತ್ತವೆ. ಅದಕ್ಕೆ ಪರಿಹಾರ ಇದೆ. ನಾವು ಕೇವಲ ಸಮಸ್ಯೆಯ ಬಗ್ಗೆ ಆಲೋಚನೆ ಮಾಡದೇ ಪರಿಹಾರದ ಬಗ್ಗೆಯೂ ಆಲೋಚನೆ ಮಾಡುತ್ತೇವೆ ಎಂದರು.

ಸಂಸ್ಕೃತಿ ಮರೆಯಬಾರದು : ನಾಗರಿಕತೆ ಮತ್ತು ಸಂಸ್ಕೃತಿಯ ವ್ಯತ್ಯಾಸ ತಿಳಿದುಕೊಳ್ಳ ಬೇಕಿದೆ. ಸಾಕಷ್ಟು ಸಾಧನೆ ಮಾಡಿದ್ದೇವಾದರೂ, ಸಂಸ್ಕೃತಿ ಮರೆಯುತ್ತಿದ್ದೇವೆ. ಈಗ ಯಾವ ಹಂತದಲ್ಲಿದ್ದೇವೆ ಎನ್ನುವ ಬಗ್ಗೆ ಅಧ್ಯಯನವಾಗಬೇಕಿದೆ ಎಂದರು.

ದೇಶವೊಂದರ ಜಿಡಿಪಿ ಆ ದೇಶದ ಜನರ ಸಂತೋಷದ ಮೇಲೆ ನಿರ್ಧಾರವಾಗುತ್ತದೆ ಎಂದು ಬೂತಾನ್ ದೊರೆ ಹೋರಾಟ ನಡೆಸಿ, ವರ್ಲ್ಡ್ ಬ್ಯಾಂಕ್ ಅದನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದರು.


[ays_poll id=3]