This is the title of the web page
This is the title of the web page
Crime NewsState NewsVideo News

ಬಾಲಕಿ ಮೇಲೆ ಬೀದಿ ನಾಯಿ ಡೆಡ್ಲಿ ಅಟ್ಯಾಕ್ : ಗಂಭೀರ ಗಾಯ


ರಾಯಚೂರು : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿ ಹೋಗಿದ್ದು, ಬಾಲಕಿ ಮೇಲೆ ಬೀದಿ ನಾಯಿ ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ರಾಯಚೂರು ನಗರದ ಐ ಡಿ ಎಸ್ ಎಂ ಟಿ ಬಡಾವಣೆಯಲ್ಲಿ ಬಾಲಕಿ ಮೇಲೆ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಪುನೀತಾ ಎಂಟು ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ. ವಿಚಿತ್ರವೆಂದರೆ ನಿನ್ನೆಯ ದಿನ ಇದೇ ಬಡಾವಣೆಯಲ್ಲಿ ಪುನಿತಾಳ ತಂದೆ ಸುಧಾಕರಗೂ ನಾಯಿಗಳು ಅಲ್ಲೇ ಮಾಡಿ ಗಾಯಗೊಳಿಸಿದವು. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಬಂದಾಗ ಮಗಳಿಗೂ ನಾಯಿ ಕಚ್ಚಿದ್ದಕ್ಕೆ ಕುಟುಂಬದಲ್ಲಿ ತೀವ್ರ ಬೇಸರ ವ್ಯಕ್ತವಾಗಿದೆ.

ಪುನಿತಾಳ ಮೇಲೆ ದಾಳಿ ಮಾಡಿದ್ದ ನಾಯಿ ತಲೆ ಬೆನ್ನು, ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಅದೆ ರಸ್ತೆಯಲ್ಲಿ ವಾಹನ ಸವಾರನೊಬ್ಬ ಬಂದಿದ್ದರಿಂದ ಬಾಲಕಿ ಬಚಾವ್ ಆಗಿದ್ದಾಳೆ.ಇದೆ ಸ್ಥಳದಲ್ಲಿ ಹಿರಿಯ ನಾಗರಿಕರಾದ ಮಹಿಬೂಜಿಗೂ ಕಚ್ಚಿ ಗಾಯಗೊಳಿಸಿದೆ. ಇನ್ನೂ ರಾಯಚೂರಿನ ಸಿಯತಲಾಬ್‌ನಲ್ಲೂ ಹತ್ತಕ್ಕೂ ಅಧಿಕ ಜನ ನಾಯಿದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತಿದ್ದಾರೆ.


[ays_poll id=3]