ಜ.18 ರಿಂದ ಐದು ದಿನಗಳ ಕಾಲ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್
![]() |
![]() |
![]() |
![]() |
![]() |
ರಾಯಚೂರು : ರಾಯಚೂರು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟದ ಸೀನಿಯರ್,ಅಂಡ್ ಅಂಡರ್ 19ಸಿಂಗಲ್ಸ್, ಡಬಲ್ಸ್,ಮಿಶ್ರ ಡಾಬಲ್ಸ್ ರಾಜ್ಯ ಮಟ್ಟದ ರ್‍ಯಾಂಕಿಂಗ್ ಪಂದ್ಯಾವಳಿಗಳು ನಡಿಯಲಿವೆ ಎಂದು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ಬೆಲ್ಲಂ ಕಿರಣ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ದಿನಾಂಕ 18 ರಿಂದ 23 ರವರಿಗೆ ಪಂದ್ಯಾವಳಿಗಳು ನಗರದ ಮಹಾತ್ಮಾ ಗಾಂಧಿ ಇಂಡೂರ್ ಸ್ಟೇಡಿಯಂನಲ್ಲಿ ನಡಿಯಲಿವೆ,ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಆಡಲು ವಿವಿಧ ಜಿಲ್ಲೆಯಿಂದ 395 ಆಟಗಾರರು ಭಾಗವಹಿಸಲಿದ್ದಾರೆ, ಇದರಲ್ಲಿ ರಾಯಚೂರು ಜಿಲ್ಲೆಯಿಂದ ಮುರುನಾಲ್ಕು ತಂಡಗಳು ಭಾಗವಹಿಸಬಹುದು, ಆಟಗಾರರಿಗೆ ಊಟ, ವಸತಿ, ಹಾಗೂ ಇನ್ನಿತರ ಖರ್ಚು ಒಟ್ಟಾರೆ ಪಂದ್ಯಾವಳಿಗೆ ಅಂದಾಜು 15 ಲಕ್ಷ ಖರ್ಚುಗಾಬಹುದು ಎಂದರು.
ರಾಜ್ಯ ಕೆ ಬಿ ಎ ಅಂಡರ್ ಅಲ್ಲಿ ಬರುವ ಎಲ್ಲಾ ನಿಯಮಗಳನ್ನು ಪಂದ್ಯಾವಳಿಯಲ್ಲಿ ಪಾಲಿಸಲಾಗುವುದು ಬಹುಮಾನ, ಟ್ರೋಫಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
![]() |
![]() |
![]() |
![]() |
![]() |