
ರಾಯಚೂರು : ಜಿಲ್ಲೆಯಾದ್ಯಂತ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. 20 ದಿನಗಳಿಂದ ಸುರಿದ ಒಂದು ಮಳೆಯಿಂದಾಗಿ ರೈತರು ನಾಟಿ ಮಾಡಿದ್ದರು. ಮೊಳಕೆಯೊಡೆದ ಬೆಳೆಯನ್ನು ಉಳಿಸಿಕೊಳ್ಳಲು ಇದೀಗ ರೈತರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.
ಮೊಳಕೆ ಹೊಡೆದ ಅಲ್ಪಬೆಳೆಯನ್ನು ಉಳಿಸಿಕೊಳ್ಳುವ ಸಣ್ಣ ಪ್ರಯತ್ನಕ್ಕೆ ರೈತ ಮುಂದಾಗಿದ್ದು. ಇಲ್ಲೊಬ್ಬ ರೈತ 15 ಎಕರೆಯಲ್ಲಿ ಹತ್ತಿ ಬಿತ್ತನೆ ಮಾಡಿದ್ದು ಅವು ಮೊಳಕೆಯೊಡೆದಿವೆ. ಇದೀಗ ಮಳೆ ಬಾರದ ಹಿನ್ನೆಲೆಯಲ್ಲಿ ರೈತ ಸಿದ್ಧಾರಡ ಆ ಒಂದು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಹತ್ತಿ ಬೆಳೆಗೆ ಲೋಟದ ಮೂಲಕ ನೀರು ಹಾಕಲಾಗುತ್ತಿದೆ. ಟ್ಯಾಂಕರ್‌ವೊಂದಕ್ಕೆ ಒಂದು ಸಾವಿರದಿಂದ ಎರಡು ಸಾವಿರ ರೂ ಬಾಡಿಗೆ ನೀಡಿ, ಕೂಲಿ ಕಾರ್ಮಿಕರಿಗೆ ದಿನಕ್ಕೆ 300 ರೂಪಾಯಿಯಂತೆ ಕೂಲಿ ಕೊಟ್ಟು ಬೆಳೆಗೆ ನೀರು ಹರಿಸುತ್ತಿದ್ದಾರೆ.
ಒಂದು ಲೋಟದ ಮೂಲಕ ಒಂದು ಸಸಿಗೆ ನೀರು ಉಣಿಸಲಾಗುತ್ತಿದೆ. ಬಿತ್ತನೆ ಮಾಡಿದ ಖರ್ಚಿಕ್ಕಿಂತ ಬೆಳೆ ಉಳಿಸಿಕೊಳ್ಳಲು ಹಚ್ಚು ಹಣ ಖರ್ಚು ಆಗುತ್ತಿದೆ, ಒಂದು ದಿನಕ್ಕೆ 15 ಜನ ಕೂಲಿ ಕಾರ್ಮಿಕರು ಇದ್ದರೂ ಸಹ ಒಂದು ಎಕರೆ ಪ್ರದೇಶಕ್ಕೆ ಮಾತ್ರ ನೀರು ಹರಿಸುತ್ತಿದ್ದಾರೆ.
ಮಳೆ ಬಾರದ ಲಕ್ಷಣಗಳಿರುವ ಕಾರಣದಿಂದ ಈ ರೀತಿಯಾಗಿ ನೀರು ಹರಿಸಲಾಗುತ್ತಿದೆ, ಈ ಬಾರಿಯ ಬರಗಾಲದಿಂದ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ. ಇದರಿಂದ ಸಂಪೂರ್ಣವಾದ ಫಸಲು ಪಡೆಯಲು ಆಗಲ್ಲ ಆದರೆ ಮೊಳಕೆ ಒಡೆದಿರುವ ಬೆಳೆ ಉಳಿಸಿಕೊಳ್ಳುವ ಸಣ್ಣ ಪ್ರಯತ್ನ ರೈತನದ್ದಾಗಿದೆ.
![]() |
![]() |
![]() |
![]() |
![]() |
[ays_poll id=3]