This is the title of the web page
This is the title of the web page
Local News

ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ್ರು ಸಿದ್ದರಾಮಯ್ಯ


ದೇವದುರ್ಗ : ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ್ದಾರೆ ಎಂದು ಸಿಟಿ ರವಿ ದೇವದುರ್ಗ ಜನಸಂಕಲ್ಪ ಯಾತ್ರೆಯಲ್ಲಿ ವ್ಯಂಗ್ಯ ಮಾಡಿದರು.

ದೇವದುರ್ಗ ವಿಧಾನಸಭಾ ಕ್ಷೇತ್ರದಿಂದ ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಜನ ಸಂಕಲ್ಪ ಯಾತ್ರೆ ಆರಂಭವಾಗಿದೆ, ಈ ವೇಳೆ ಬಹಿರಂಗ ಸಭೆಯನ್ನ ದೇವದುರ್ಗಾ ಪಟ್ಟಣದಲ್ಲಿ ಆ ಯೋಜನೆ ಮಾಡಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಟಿ ರವಿ ಅವರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ದೇಶದ ಬಡ ಜನರಿಗೆ ಅಕ್ಕಿ ಕೊಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಆ ಸಂದರ್ಭದಲ್ಲಿ ರಾಜ್ಯಕ್ಕೆ ಒಂದು ಕೆಜಿ ಅಕ್ಕಿಗೆ 29 ರೂಪಾಯಿ ನೀಡುತ್ತಿತ್ತು, ಆದರೆ ರಾಜ್ಯ ಸರ್ಕಾರ ಕೇವಲ ರೂ.3 ಪಾವತಿ ಮಾಡಬೇಕಾಗಿತ್ತು. ಆದರೂ ಕೂಡ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ನಾನು ಕೊಟ್ಟೆ, ನಾನು ಕೊಟ್ಟೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಕೊಟ್ಟಿದ್ದು ಕೇಂದ್ರದ ಮೋದಿ ಸರ್ಕಾರ ಎಂದು ವ್ಯಂಗ್ಯ ಮಾಡಿದರು.

ಹೊರದೇಶಗಳಲ್ಲಿ ಒಂದು ಕರೋನ ಲಸಿಕೆಗೆ 7,000 ಕೊಡಬೇಕು ಅಂದರೆ ಮೂರು ಲಸಿಕೆಗೆ 21,000 ವೇಯಿಸಬೇಕು, ಆದರೆ ನಮ್ಮ ಜನರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಮೋದಿಯವರು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿದ್ದಾರೆ. ಇನ್ನೂ ದೇವದುರ್ಗ ಕ್ಷೇತ್ರದ ನಿಮ್ಮ ಶಾಸಕ ಶಿವನಗೌಡ ನಾಯಕ್ ಅದೇನು ಮಂತ್ರ ಹೇಳುತ್ತಾರೋ ಗೊತ್ತಿಲ್ಲ, ಶಾಸಕನಾಗಿ ನಾನು ಅವರಷ್ಟು ಅಭಿವೃದ್ಧಿ ಕೆಲಸ ಮಾಡಲು ಆಗುತ್ತಿಲ್ಲ. ಒಂದೇ ಅವಧಿಯಲ್ಲಿ 55000 ಮನೆಗಳನ್ನು ತಂದಿದ್ದಾರೆ ಎಂದರೆ ಅದು ಸಾಮಾನ್ಯ ಮಾತಲ್ಲ ಎಂದು ಹೇಳಿದರು.


[ays_poll id=3]