This is the title of the web page
This is the title of the web page
international News

ವಯಸ್ಸು ಕಡಿಮೆ ಮಾಡುವ ಔಷಧಿ ಕಂಡು ಹಿಡಿದ ವೈಜ್ಞಾನಿಗಳು


K2 ನ್ಯೂಸ್ ಡೆಸ್ಕ್ : ವಿಜ್ಞಾನಿಗಳು ಆಚೇರಿಯ ಸಂಶೋಧನೆಯೆಂದನ್ನು ಮಾಡಿದ್ದು, ವಯಸ್ಸು ಕಳೆದಂತೆ ಚರ್ಮು ಸುಕ್ಕುಗಟ್ಟಿ ಮುದುಕ-ಮುದುಕಿಯರಾಗೋದು ಇನ್ನು ಅನುಮಾನ. ಹಾರ್ವರ್ಡ್‌ ವಿವಿಯ ವಿಜ್ಞಾನಿಗಳು 6 ಡ್ರಗ್‌ನ ಕಾಕ್‌ಟೇಲ್‌ಅನ್ನು ಸಂಶೋಧನೆ ಮಾಡಿದ್ದು, ಇದರಿಂದ ನೀವು ವಯಸ್ಸು ಹಿಂದಕ್ಕೆ ಪಡೆಯಬಹುದು.

ಹೌದು ರಿವರ್ಸ್‌ ಏಜಿಂಗ್‌ ಸಾಧ್ಯ ಎಂದು ಸಂಶೋಧನೆ ಮಾಡಿದ ವಿಜ್ಞಾನಿಗಳು ಹೇಳುತ್ತಿದ್ದಾರೆ. ರಿವರ್ಸ್‌ ಏಜಿಂಗ್‌ ಎಂದರೆ, ವೃದ್ಧರನ್ನು ಪುನರ್ಯೌವನಗೊಳಿಸುವ ಪ್ರಕ್ರಿಯೆ. ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿರುವ ಪ್ರಕಾರ, ಏಜಿಂಗ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವಾದ ಸೆಲ್ಯುಲಾರ್ ವಯಸ್ಸನ್ನು ಹಿಮ್ಮೆಟ್ಟಿಸಲು ರಾಸಾಯನಿಕವಾಗಿ ಪ್ರೇರಿತ ಮರು-ಪ್ರೋಗ್ರಾಮಿಂಗ್ ನಲ್ಲಿ  ಇದು ಬಹಿರಂಗಗೊಂಡಿದೆ. ಅಧ್ಯಯನದ ಪ್ರಕಾರ ಈ 6 ರಾಸಾಯನಿಕಗಳನ್ನು ಬೆರೆಸಿ ಫೌಂಟೇನ್ ಆಫ್ ಯೂತ್ ಎಂಬ ಹೆಸರಿನ ಔಷಧವನ್ನು ತಯಾರಿಸಲಾಗುತ್ತಿದ್ದು, ಇದು ವಯಸ್ಸನ್ನು ಕಡಿಮೆ ಮಾಡುತ್ತದೆ ಮತ್ತು ತ್ವಚೆಯನ್ನು ಮೊದಲಿನಂತೆಯೇ ಯೌವನವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. 6 ರಾಸಾಯನಿಕಗಳ ಮಿಶ್ರಣವನ್ನು ರಾಸಾಯನಿಕ ಕಾಕ್‌ಟೇಲ್‌ ಎಂದು ಸದ್ಯಕ್ಕೆ ಕರೆಯಲಾಗುತ್ತಿದೆ.

ವಿಜ್ಞಾನಿಗಳ ಪ್ರಕಾರ, ಈ ಕಾಕ್‌ಟೇಲ್‌ ಮಾನವನ ಚರ್ಮದ ಜೀವಕೋಶಗಳಲ್ಲಿನ ವಯಸ್ಸಾದ ಪ್ರಕ್ರಿಯೆಯನ್ನು ಒಂದು ವಾರದಲ್ಲಿ ಹಲವಾರು ವರ್ಷಗಳವರೆಗೆ ಹಿಮ್ಮೆಟ್ಟಿಸುತ್ತದೆ. 4 ದಿನಗಳ ಚಿಕಿತ್ಸೆಯನ್ನು ಪಡೆದುಕೊಂಡರೆ, 3 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.


[ays_poll id=3]