This is the title of the web page
This is the title of the web page
Crime NewsState NewsVideo News

ಪತ್ರಕರ್ತರ ಸೋಗಿನಲ್ಲಿ ಶ್ರೀಗಂಧ ಸ್ಮಗ್ಲಿಂಗ್..


K2kannadanews.in

SMUGGLING : ರಾಜ್ಯದಲ್ಲಿ(State) ನಕಲಿ ಪತ್ರಕರ್ತರ (Fake Repoters) ಹಾವಳಿ ಮಿತಿಮೀರಿ ಹೋಗಿದ್ದು, ನಿಜವಾದ ಪತ್ರಕರ್ತರು ಮುಜುಗರಕ್ಕೆ ಒಳಗಾಗುವ ಪ್ರಸಂಗಗಳು  ನಿರ್ಮಾಣವಾಗುತ್ತಿವೆ. ಪತ್ರಕರ್ತರ ಸೋಗಿನಲ್ಲಿ 40 ಕೆಜಿ ಶ್ರೀಗಂಧ ಕಳ್ಳ ಸಾಗಾಟ (Sandalwood smuggling) ಮಾಡುತ್ತಿದ್ದ ಘಟನೆ ಚಿಕ್ಕೊಡಿಯಲ್ಲಿ ನಡೆದಿದೆ.

ಹೌದು ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿಯಲ್ಲಿ (Chikkodi) ಈ ಘಟನೆ ನಡೆದಿದ್ದು, ನಿಖರ ಮಾಹಿತಿ ಮೇರೆಗೆ ಹುಕ್ಕೇರಿ (Hukkeri) ಅರಣ್ಯ ಇಲಾಖೆ ಅಧಿಕಾರಿಗಳು (Forest officer’s) ಕಾರ್ಯಾಚರಣೆ ನಡೆಸಿ, 40 ಕೆಜಿ ಶ್ರೀಗಂಧ ಕಳ್ಳ ಸಾಗಾಟಕ್ಕೆ ಮಾಡುತ್ತಿದ್ದ ಕಾರ್ (Car) ಮೇಳೆ ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ ನಲ್ಲಿದ್ದ ಆರೋಪಿಗಳು ಕಾರನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ (Escaped). ಕಾರ ಮೇಲೆ ಮಿಡಿಯಾ (Media) ಎಂದು ಬರೆಸಿ ಸ್ಮಗ್ಲಿಂಗ್ ಮಾಡುತ್ತಿದ್ದ ಖತರನಾಕ್ ಗ್ಯಾಂಗ್ (Gang) ಇದಾಗಿದೆ.

ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಶ್ರೀಗಂಧ ಕಳ್ಳ ಸಾಗಾಟ ಮಾಡುತ್ತಿದ್ದ ನಕಲಿ ಪತ್ರಕರ್ತರು ಪರಾರಿಯಾಗಿದ್ದು, ಪರಸಪ್ಪ ಭಜಂತ್ರಿ ಎಂಬುವರಿಗೆ ಸೇರಿದ ಕಾರಿನಲ್ಲಿ ಪುಂಡಲಿಕ ಭಜಂತ್ರಿ ಎಂಬುವ ನಕಲಿ ಯೂ ಟ್ಯೂಬ್ (YouTube ID) ಐಡಿ ಪತ್ತೆಯಾಗಿದೆ, ಇದೀಗ ಆರೋಪಿಗಳ ಪತ್ತೆಗೆ ಪೊಲೀಸರು (Police) ಬಲೆ ಬೀಸಿದ್ದಾರೆ.


[ays_poll id=3]