This is the title of the web page
This is the title of the web page
Crime NewsState News

ರಾಯಚೂರು ಯುವತಿಗೆ ಹೀರೋಯಿನ್ ಆಸೆ ತೋರಿಸಿ ಅತ್ಯಾಚಾರ : ದೂರು ದಾಖಲು


K2kannadanews.in

woman raped by actor : ಸಿನಿಮಾಗಳಲ್ಲಿ (Cinema) ಹಿರೋಯಿನ್‌ ಪಾತ್ರ (Hiroin Chance) ಕೊಡಿಸುವುದಾಗಿ ನಂಬಿಸಿ, ರಾಯಚೂರು ಮೂಲದ ಯುವತಿ ಜತೆ ದೈಹಿಕ ಸಂಪರ್ಕ (Raped) ಬೆಳೆಸಿ ವಂಚಿಸಿದ ಆರೋಪದಡಿ ಸ್ಯಾಂಡಲ್‌ವುಡ್‌ನ‌ ಸಹ ನಟ ಸಂತೋಷ್‌ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು (Raichur) ಮೂಲದ ಈ ಯುವತಿ ಪೋಷಕರೊಂದಿಗೆ ಬೆಂಗಳೂರಿನಲ್ಲಿ (Bangalore) ನೆಲೆಸಿದ್ದಾರೆ. 2019ರಲ್ಲಿ ಸಂತೋಷ್‌ (Snthosh) ಈ ಯುವತಿಯನ್ನು ಪರಿಚಯಿಸಿಕೊಂಡಿದ್ದ, ಬೆಂಗಳೂರಿನ ಅತ್ತಿಬೆಲೆಯ ಶಾನಭೋಗನಹಳ್ಳಿ ನಿವಾಸಿ ಸಂತೋಷ್‌. ತಾನೊಬ್ಬ ಸಿನಿಮಾ ನಟ ಎಂದು ಬಿಂಬಿಸಿಕೊಂಡಿದ್ದ ಆರೋಪಿ ಕನ್ನಡ (Kannada) ಹಾಗೂ ತಮಿಳು (Thamil) ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ಯುವತಿಯನ್ನು ನಂಬಿಸಿದ್ದ. ಈತನ ಬಣ್ಣದ ಮಾತಿಗೆ ಮರುಳಾದ ಯುವತಿ ಆರೋಪಿಯನ್ನು ನಂಬಿ ತನ್ನ ಮೊಬೈಲ್ (Mobile) ನಂಬರ್ ನೀಡಿದ್ದರು. ಯುವತಿಗೆ ನಿರಂತರವಾಗಿ ಕರೆ (Call) ಮಾಡುತ್ತಿದ್ದ ಸಂತೋಷ್, ವಿವಾಹವಾಗುವುದಾಗಿ (Marriage) ಹೇಳಿ ಹತ್ತಿರವಾಗಿದ್ದ. ಯುವತಿ ಹಾಗೂ ಆರೋಪಿ ಜೊತೆಯಾಗಿ ಸುತ್ತಾಟ ನಡೆಸಿದ್ದರು.

ಈ ಅವಕಾಶವನ್ನು ಬಳಸಿಕೊಂಡ ಆರೋಪಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ (Sexual harassment) ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಸಂತೋಷ್ ಗೆ ಈಗಾಗಲೇ ಮದುವೆಯಾಗಿತ್ತು. ಈ ವಿಷಯ ಗೊತ್ತಾದ ನಂತರ ಯುವತಿ, ಆರೋಪಿ ಮನೆಗೆ ಹೋಗಿ ಗಲಾಟೆ ನಡೆಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ, ಯುವತಿಯ ಮನೆಗೆ ಬಂದು ಆತನೂ ಗಲಾಟೆ ಮಾಡಿದ್ದಾನೆ. ಯುವತಿಯ ಜೊತೆಗಿರುವ ಖಾಸಗಿ ಫೋಟೊ (Photo) ಹಾಗೂ ವಿಡಿಯೊಗಳನ್ನು (videos) ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈತನ ವಂಚನೆ ಕುರಿತು ಈ ಹಿಂದೆಯೂ ಯುವತಿ ದೂರು ನೀಡಿದ್ದರು. ಈ ಪ್ರಕರಣವನ್ನು ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಅತ್ತಿಬೆಲೆ ಠಾಣೆಗೆ (Athibele police station) ವರ್ಗಾಯಿಸಲಾಗಿತ್ತು. ಇದೀಗ ಮತ್ತೊಂದು ದೂರು ನೀಡಿದ್ದು, ಎರಡನ್ನೂ ಸೇರಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


[ays_poll id=3]