![]() |
![]() |
![]() |
![]() |
![]() |
ರಾಯಚೂರು : ಜಿಲ್ಲೆಯಲ್ಲಿ ಎಮ್ಸ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಕಳೆದ 316 ದಿನಗಳಿಂದ ನಡೆಯುತ್ತಿರುವ ಹೋರಾಟ ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ರಾಯಚೂರು ಬಂದ್ ಕರೆ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಮಾಧಾನ ವ್ಯಕ್ತಪಡಿಸಲಾಯಿತು. ಎಲ್ಲೋ ಒಂದು ಕಡೆ ಈ ಒಂದು ಬಂದ್ ಬಿಸಿ ದೇವದುರ್ಗ ಬಿಜೆಪಿ ಸಮಾವೇಶಕ್ಕೆ ಆಗಮಿಸುತ್ತಿರುವ ಅಮಿತ್ ಶಾ ಕಾರ್ಯಕ್ರಮಕ್ಕೆ ತಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಏಮ್ಸ್ ಹೋರಾಟ ಸಮಿತಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ, ಇಂದು ರಾಯಚೂರು ಬಂದ್ ನಡೆಸಿತು. ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದ್ದವು. ಬಸ್, ಆಟೋ ಸಂಚಾರ ಹೊರತು ಪಡಿಸಿ ವ್ಯಾಪಾರ-ವಹಿವಾಟುಗಳೆಲ್ಲಾ ಬಂದ್ ಆಗಿದ್ದವು. ಏಮ್ಸ್ ಗಾಗಿ 316 ದಿನಗಳು ನಿರಂತರವಾಗಿ ಹೋರಾಟ ನಡೆಸಲು ಏಮ್ಸ್ ಹೋರಾಟ ಸಮಿತಿ ನಿರ್ಧರಿಸಿದ್ದು ಕಳೆದ 66 ದಿನಗಳಿಂದ ಪ್ರತಿದಿನ ಇಬ್ಬರಂತೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಆದರೂ ರಾಯಚೂರಿಗೆ ಮಾತ್ರ ಏಮ್ಸ್ ಆಸ್ಪತ್ರೆ ನೀಡಿಲ್ಲ.
ಈ ಹಿನ್ನೆಲೆ ಇಂದು ರಾಯಚೂರು ಬಂದ್ ಗೆ ಕರೆ ನೀಡಲಾಗಿತ್ತು. ಈ ವೇಳೆ ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಹೋರಾಟಗಾರರು ಟೈರ್ ಗೆ ಬೆಂಕಿ ಹಚ್ಚುವ ಮೂಲಕ ಅಸಮಾಧಾನ ಹೊರಹಾಕಿದರು. ಇದೇ ಮಾರ್ಚ್ 26ಕ್ಕೆ ರಾಯಚೂರು ಜಿಲ್ಲೆಗೆ ಅಮಿತ್ ಶಾ ಆಗಮಿಸಲಿದ್ದಾರೆ. ಕೇಂದ್ರ ಸಚಿವರಿಗೆ ಬಿಸಿ ಮುಟ್ಟಿಸಲು ಬಂದ್ ಮಾಡಲಾಗಿದ್ದು ಬಂದ್ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
![]() |
![]() |
![]() |
![]() |
![]() |
[ays_poll id=3]