
ದೇವದುರ್ಗ : ರಾಹುಲ್ ಗಾಂಧಿಯವರೇ ತೀವ್ರವಾದಿಗಳನ್ನು ಕಂಡೆ, ನೋಡಿದೆ ಎನ್ನುತ್ತೀರಿ, ಅವರೇನಾದರೂ ನಿಮ್ಮ ಸಂಬಂಧಿಕರ, ಬೀಗರ ಆಗಲೆ ದೂರು ಕೊಡಬೇಕಾಗಿತ್ತು ಎಂದು ಸಚಿವ ಶ್ರೀರಾಮುಲು ಅವರು ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ದೇವದುರ್ಗ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜನ ಜನಸಂಕಲ್ಪ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು, ಬಿಜೆಪಿ ಶಾಸಕರು ಎಂದಿಗೂ ಕೂಡ ಸಂವಿಧಾನದ ಆಶಯ ಧರ್ಮವನ್ನು ಬಿಟ್ಟು ಒಂದು ಇಂಚು ಕೂಡ ಕೆಲಸ ಮಾಡಿಲ್ಲ. ಧರ್ಮಕ್ಕಾಗಿ ನಾವು ಪ್ರಾಣ ಕೊಡಲು ಸಿದ್ದರಿದ್ದೇವೆ. ಜಾತಿಯಲಿ ನಾವು ಕಡಿಮೆ ಇರಬಹುದು ಆದರೆ ಮನಸ್ಸಿನಿಂದ ಎಲ್ಲಾ ಜಾತಿಯವರನ್ನು ಒಗ್ಗೂಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಭಾರತ ಜೋಡೊ ಯಾತ್ರೆ ಕಾಶ್ಮೀರಕ್ಕೆ ತಲುಪಿದಾಗ ರಾಹುಲ್ ಗಾಂಧಿಯವರು ಅಲ್ಲಿ ತೀವ್ರವಾದಿಗಳನ್ನು ಕಂಡ್ರಂತೆ, ನೋಡಿದೆ ಎಂದು ಹೇಳುತ್ತಾರೆ. ಆದರೆ ಅವರು ನಿಮಗೇನು ಸಂಬಂಧಿಕರೇ ಬೀಗರೇ, ನಿಮ್ಮ ತಂದೆ ಮತ್ತು ಅಜ್ಜಿಯನ್ನ ಕೊಂದವರು ತೀವ್ರವಾದಿಗಳೇ, ಒಂದು ವೇಳೆ ನೀವು ಅವರನ್ನು ನೋಡಿದ್ದರೆ ದೂರು ಕೊಡಬಹುದಿತ್ತಲ್ಲ. ಆದರೆ ಇವತ್ತು ದೇಶದ ಮಾನ ಮರ್ಯಾದೆ ಹರಾಜು ಹಾಕುವಂಥ ಕೆಲಸ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
![]() |
![]() |
![]() |
![]() |
![]() |
[ays_poll id=3]