ದೇಶದಲ್ಲಿ ಮತ್ತೆ ಕೊರಂಟೈನ್ ಆರಂಭ..
![]() |
![]() |
![]() |
![]() |
![]() |
K2 ಕೂಲಿಂಗ್ ನ್ಯೂಸ್ : ಚೀನಾದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿರುವ ಬೆನ್ನಲ್ಲೇ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಚೀನಾ ಸೇರಿದಂತೆ 5 ದೇಶಗಳಿಂದ ಬರುವ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಜೊತೆಗೆ ಆರ್ ಟಿಪಿಸಿಆರ್ ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಕಟ್ಟೆಚ್ಚರಕ್ಕೆ ಮುಂದಾದ ಕೇಂದ್ರ ಸರ್ಕಾರ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಕಾಂಗ್ ಮತ್ತು ಥೈಲ್ಯಾಂಡ್ನಿಂದ ಅಂತರರಾಷ್ಟ್ರೀಯ ಆಗಮನಕ್ಕೆ ಆರ್ಟಿ-ಪಿಸಿಆರ್ ಕಡ್ಡಾಯವಾಗಲಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಇನ್ನು ಈ ದೇಶಗಳಿಂದ ಬಂದ ಯಾವುದೇ ಪ್ರಯಾಣಿಕರಿಗೆ ರೋಗಲಕ್ಷಣಗಳು ಕಂಡುಬಂದರು ಅಥವಾ ಕೋವಿಡ್ ಪಾಸಿಟಿವ್ ಎಂದು ಕಂಡುಬಂದರೆ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
![]() |
![]() |
![]() |
![]() |
![]() |