ಕೇಂದ್ರ ಬಜೆಟ್ ನಲ್ಲಿ ಪಂಜಾಬ್ ಕಾಣೆ : ಮಾನ್ ಕಳವಳ
![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : ಕೇಂದ್ರ ಸರ್ಕಾರ ಹಿಂದೂ ಮಂಡಿಸಿರುವಂತಹ ಬಜೆಟಿನ ಪರ ವಿರೋಧ ವ್ಯಕ್ತವಾಗುತ್ತಿದೆ. ಇವುಗಳ ಮಧ್ಯೆ ಈ ಹಿಂದೆ ಪಂಜಾಬ್ ಗಣರಾಜ್ಯೋತ್ಸವದಲ್ಲಿ ಕಾಣೆಯಾಗುತ್ತಿತ್ತು. ಈಗ ಬಜೆಟ್ ನಲ್ಲಿಯೇ ಕಾಣೆಯಾಗುತ್ತಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್ ವಿರುದ್ಧ ಅಸಮಾಧಾನವನ್ನು ಪಂಜಾಬ್ ಸಿಎಂ ಹೊರಹಾಕಿದ್ದಾರೆ. ನಮ್ಮ ರಾಜ್ಯವು ಪಾಕಿಸ್ತಾನದೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿದ್ದು ಬಿಎಸ್ಎಫ್ ಉನ್ನತೀಕರಣ, ಆಧುನೀಕರಣ ಹಾಗೂ ಡೋನ್ ಚಟುವಟಿಕೆಗಳ ಸದ್ದು ಅಡಗಿಸಲು 1000 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ ಈ ಬಗ್ಗೆ ಬಜೆಟ್ ನಲ್ಲಿ ಯಾವುದೇ ರೀತಿಯ ಪ್ರಸ್ತಾಪವನ್ನು ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
![]() |
![]() |
![]() |
![]() |
![]() |