
ರಾಯಚೂರು. ಜಿಲ್ಲೆಯಲ್ಲಿಯೇ ಏಮ್ಸ್ ಸ್ಥಾಪನೆ ಮಾಡಬೇಕು, ಏಮ್ಸ್ ಮಾದರಿ ಆಸ್ಪತ್ರೆ ನಮಗೆ ಬೇಡವೆಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ಕಳೆದ 287ನೇ ದಿನ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ವನ್ನು ನಡೆಸುತ್ತಿದ್ದು, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡಲು ಜಿಲ್ಲೆಗೆ ಎರಡು ಬಾರಿ ಮುಖ್ಯಮಂತ್ರಿಗ ಳು ಬೇಟಿ ನೀಡಿದ ಸಂದರ್ಭದಲ್ಲಿ ಭರವಸೆ ನೀಡಿದ್ದರು, ಇದೀಗ ಬಜೆಟ್ ನಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಐಐಟಿ ಸ್ಥಾಪನೆ ವಿಚಾರದಲ್ಲಿ ನಂಜುಂ ಡಪ್ಪ ಅವರ ವರದಿಯಲ್ಲಿ ಉಲ್ಲೇಖವಿದ್ದರೂ, ಕಲಬುರಗಿ ಸಂಪುಟದಲ್ಲಿ ತೀರ್ಮಾನ ಕೈಗೊಂಡರೂ, ಸಿದ್ದರಾಮಯ್ಯ ಅವರು ರಾಯಚೂರು ಹೆಸರು ಜೊತೆಗೆ ಧಾರವಾಡ, ಮೈಸೂರು ಹೆಸರು ಕಳಿಸಿ ವಾಮ ಮಾರ್ಗದಿಂದ ಐಐಟಿ ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದೀರಿ ಎಂದು ಕಿಡಿ ಕಾರಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ಘೋಷಣೆ ಮಾಡಿದ್ದು, ರಾಯಚೂರು ಜಿಲ್ಲೆಯಲ್ಲಿಯೇ ಸ್ಥಾಪನೆ ಮಾಡಿಬೇಕು, ಆದರೆ ಏಮ್ಸ್ ಮಾದರಿ ಆಸ್ಪತ್ರೆಯನ್ನು ಬಜೆಟ್ ನಲ್ಲಿ ಘೋಷಣೆ ಮಾಡಿ ಏಮ್ಸ್ ಆಸ್ಪತ್ರೆಯನ್ನು ಧಾರವಾಡಕ್ಕೆ ತೆಗೆದು ಕೊಂಡು ಹೋಗಲು ಕುಂತಂತ್ರ ನಡೆಸಿದ್ದೀರಿ ಎಂದು ದೂರಿದರು.
ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಐಐಟಿ ಬದಲಾಗಿ ಏಮ್ಸ್ ರಾಯಚೂರಿನಲ್ಲಿ ಸ್ಥಾಪನೆ ಮಾಡುವುದಾಗಿ ಹೇಳಿದ್ದು, ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರು, ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ತಪ್ಪಿದ್ದು, ಏಮ್ಸ್ ಮಾದರಿ ಘೋಷಣೆ ಮಾಡಿದ್ದಾರೆ, ಈ ಕೂಡಲೇ ಜಿಲ್ಲೆಯಲ್ಲಿಯೇ ಏಮ್ಸ್ ಪೂರ್ಣ ಪ್ರಮಾಣದ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವೀರೇಶ ಆರ್, ಶೇಖ್ ಖಾದರ್ ಪಾಷಾ, ಸೈಯದ್ ನುಸರತ್, ಫರೀದ್, ಅಬ್ದುಲ್ ವಾಜೀದ್, ಜಾವೀದ್ ಖಾನ್, ಎಂಡಿ ಮುಸ್ತಫಾ, ಮೊಹಿನುದ್ದಿನ್ ಸೇರಿದಂತೆ ಅನೇಕರು ಇದ್ದರು.
![]() |
![]() |
![]() |
![]() |
![]() |
[ays_poll id=3]