This is the title of the web page
This is the title of the web page
State News

15 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲು ಪ್ರಸ್ತಾವನೆ


K2 ನ್ಯೂಸ್ ಡೆಸ್ಕ್ : ಶಿಕ್ಷಕರ ವರ್ಗಾವಣೆ ನಿಯಂತ್ರಣ-2020 ತಿದ್ದುಪಡಿ ಕಾಯ್ದೆ, ಜಾರಿಯ ನಂತರ ಮೊದಲ ಬಾರಿ ನಡೆದ ವರ್ಗಾವಣೆಯ ಪ್ರಯೋಜನೆಯನ್ನು 30,629 ಶಿಕ್ಷಕರು ಪಡೆದಿದ್ದಾರೆ. ಇದರೊಂದಿಗೆ ವರ್ಗಾವಣೆಯಿಂದ ತೆರವಾಗುವ ಸ್ಥಾನಕ್ಕೆ ಮತ್ತೆ 15 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿದೆ ಶಿಕ್ಷಣ ಇಲಾಖೆ.

ರಾಜ್ಯದ ಸರ್ಕಾರಿ ಶಾಲೆಗಳ 30,629 ಶಿಕ್ಷಕರು ವರ್ಗಾವಣೆ ಹಿನ್ನೆಲೆಯಲ್ಲಿ, ತೆರವಾಗುವ ಸ್ಥಾನಕ್ಕೆ ಮತ್ತೆ 15 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು, ಅನುಮತಿ ಕೋರಿ ಶಾಲಾ ಶಿಕ್ಷಣ ಇಲಾಖೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ವರ್ಗಾವಣೆಯಾದ ಸ್ಥಳಗಳಿಗೆ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ಪ್ರಕ್ರಿಯೆ ಪೂರ್ಣಗೊಂಡ ನಂತರ ಉತ್ತರ ಕರ್ನಾಟಕ, ಮಲೆನಾಡು ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಲಿದೆ.

ಶಿಕ್ಷಕರಿಲ್ಲದ ಕಡೆ ಬಿಡುಗಡೆ ವಿಳಂಬ: ಪ್ರಾಥಮಿಕ ಶಾಲೆಯ 23,747 ಹಾಗೂ ಪ್ರೌಢಶಾಲೆಗಳ 6,882 ಶಿಕ್ಷಕರು ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ. ವರ್ಗಾವಣೆಯಾದವರು ಕೆಲ ಜಿಲ್ಲೆಗಳಲ್ಲಿ ತಾವು ಆಯ್ಕೆಮಾಡಿಕೊಂಡ ಶಾಲೆಗಳಿಗೆ ತರಳಿ ಕರ್ತವ್ಯಕ್ಕೆ ಈಗಾಗಲೇ ಹಾಜರಾಗಿದ್ದಾರೆ. ಕೆಲ ಜಿಲ್ಲೆಗಳ ಶಾಲೆಗಳಲ್ಲಿ ವರ್ಗಾವಣೆ ಆದವರನ್ನು ಕಳುಹಿಸಿದರೆ ಕಾಯಂ ಶಿಕ್ಷಕರು ಇಲ್ಲದಂತಾಗುತ್ತದೆ. ಅಂತಹ ಶಾಲೆಗಳಲ್ಲಿ ಬದಲಿ ವ್ಯವಸ್ಥೆ ಮಾಡುವವರಿಗೆ ಕರ್ತವ್ಯದಿಂದ ಬಿಡುಗಡೆ ಮಾಡದಂತೆ ಶಿಕ್ಷಣ ಇಲಾಖೆ ಸೂಚಿಸಿದೆ.


[ays_poll id=3]