
K2 ನ್ಯೂಸ್ ಡೆಸ್ಕ್ : ರಾಜ್ಯದಲ್ಲಿ ಇನ್ನು ಮುಂದೆ ಮೊಬೈಲ್ ರೀಚಾರ್ಜ್ ನಂತೆ ವಿದ್ಯುತ್ ರಿಚಾರ್ಜ್ ನಿಯಮ ಅಳವಡಿಕೆಯಾಗಲಿದೆ. ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು ರಾಜ್ಯಾದ್ಯಂತ ಎಲ್ಲ ವರ್ಗದ ಗ್ರಾಹಕರಿಗೆ ಪ್ರಿ ಪೈಡ್ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸಲು ಕರಡು ನಿಯಮ ರೂಪಿಸಿ ಅಧಿಸೂಚನೆ ಹೊರಡಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಲ್ಲಿ ಪ್ರಮುಖವಾದಂತಹ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಪೂರೈಕೆ ಬೆನ್ನಲ್ಲೇ ಪ್ರಿ ಪೈಡ್ ಸ್ಮಾರ್ಟ್ ಮೀಟರ್ ಅಳವಡಿಸಲು ಅಧಿಸೂಚನೆ ಹೊರಡಿಸಲಾಗಿದೆ. ಆಯೋಗದ ಈ ನಿಯಮ ವಾರ್ಷಿಕ ಭದ್ರತಾ ಠೇವಣಿ ಪಾವತಿಗೆ ಹೆಚ್ಚಿನ ಉಳಿತಾಯಕ್ಕೆ ಸಹಾಯವಾಗಲಿದೆ ಎನ್ನುವ ಮಾತು ಕೇಳಿಬಂದಿದೆ. ಇದರೊಂದಿಗೆ ಬಿಲ್ಲಿಂಗ್ ಸಮಯದಲ್ಲಿ ವಿದ್ಯುತ್ ಬಳಕೆಯನ್ನು ತಿದ್ದುವ ಪ್ರಯತ್ನಗಳನ್ನು ತಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ರೀತಿ ಎಲೆಕ್ಟ್ರಿಕ್ ಮೀಟರ್‌ಗಳು ಮೊಬೈಲ್‌ಗಳಿಗೆ ಪ್ರಿಫೈಯ್ಡ್ ಕರೆನ್ಸಿ ಯೋಜನೆ ರೀತಿ ಕೆಲಸ ಮಾಡಲಿವೆ. ಈ ಸ್ಮಾರ್ಟ್ ಮೀಟರ್‌ಗಳನ್ನು ಸ್ಮಾರ್ಟ್ ಫೋನ್‌ಗಳಿಗೆ ಲಿಂಕ್ ಮಾಡಲಾಗುತ್ತದೆ ಮತ್ತು ಪ್ರತಿ ತಿಂಗಳ ವಿದ್ಯುತ್ ಕೋಟಾ ಖಾಲಿಯಾದಾಗ ಗ್ರಾಹಕರಿಗೆ ಸಂದೇಶ ರವಾನಿಸುವ ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯುತ್ ಬಳಕೆಗಾಗಿ ರಿಚಾರ್ಜ್ ಸಹ ಮಾಡಬಹುದಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
![]() |
![]() |
![]() |
![]() |
![]() |
[ays_poll id=3]