This is the title of the web page
This is the title of the web page
Local News

ವಿಶ್ವಕರ್ಮ ಸಮಾಜವನ್ನು ಎಸ್.ಟಿ ಗೆ ಸೇರಿಸಲು ಒತ್ತಾಯಿಸಿ ಪಾದಯಾತ್ರೆ


ರಾಯಚೂರು : ವಿಶ್ವಕರ್ಮ ಸಮಾಜವನ್ನು ಎಸ್.ಟಿ ಮೀಸಲಾತಿಗೆ ಸೇರಿಸಲು ಒತ್ತಾಯಿಸಿ ಜನವರಿ 6 ರಂದು ಲಿಂಗಸೂಗೂರುನಿಂದ ರಾಯಚೂರುವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜವಳಗೇರಾ ಪೀಠದ ಸೂರ್ಯನಾರಾಯಣ ಸ್ವಾಮೀಜಿ ಹೇಳಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಹಾಗೂ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ 6ರಂದು ಲಿಂಗಸಗೂರು ಪಟ್ಟಣದಲ್ಲಿ ಉಪನಯನ ತಾಲೂಕ ಮಟ್ಟದ ವಿಶ್ವಕರ್ಮ ಜನ ಜಾಗೃತಿ ಸಮಾವೇಶವನ್ನು ಶಂಕರ ರೆಡ್ಡಿ ಕಳ್ಳನ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ರಾಯಚೂರು ಜಿಲ್ಲೆಯಲ್ಲಿ ಬೃಹತ್ ಪಾದಯಾತ್ರೆಯನ್ನು ವಿಶ್ವಕರ್ಮ ಸಮಾಜದವರು ಎಸ್ ಟಿ ಮೀಸಲಾತಿಗಾಗಿ ಹಮ್ಮಿಕೊಂಡಿದ್ದಾರೆ. ಲಿಂಗಸ್ಗೂರಿನಿಂದ ರಾಯಚೂರುವರೆಗೆ 100 ಕಿ.ಮೀ ಸಾವಿರಾರು ಜನ ವಿಶ್ವಕರ್ಮರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದರೆ ಎಂದರು.


[ays_poll id=3]