This is the title of the web page
This is the title of the web page
Crime NewsState NewsVideo News

ಬಹಿರಂಗವಾಹಿ 14 ಸಾವಿರ ಲಂಚ ಪಡೆದ SDA : ಸರ್ ಗೆ 3% ಯಾರು ಆ ಸರ್..? ವಿಡಿಯೋ ನೋಡಿ..


K2kannadanews.in

bribe from contractor : ತಾಲೂಕು ಪಂಚಾಯಿತಿ (Taluku panchayt SDA) ದ್ವಿತೀಯ ದರ್ಜೆ ಸಹಾಯಕಿ ಮೀನಾಕ್ಷಿ ಎಂಬುವವರು ಗುತ್ತಿಗೆದಾರರಿಂದ (contractor) 14ಸಾವಿರ (Thousand) ಲಂಚವನ್ನು ರಾಜಾರೋಷವಾಗಿ ಪಡೆದಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ.

ಹೌದು ಕಳೆದ ನಾಲೈದು ದಿನಗಳಯಿಂದಷ್ಟೇ (5 days back) ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ತಾಲೂಕು ಪಂಚಾಯಿತಿ ಕಚೇರಿಯೊಳಗೆ ದ್ವಿತೀಯ ದರ್ಜೆ ಸಹಾಯಕಿಯೊಂದಿಗೆ ಗುತ್ತಿಗೆದಾರರು ಮಾತುಕತೆ ನಡೆಸಿ, 14ಸಾವಿರ ರೂಪಾಯಿ ಹಣ ನೀಡಿರುವ 6ನಿಮಿಷ 50 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಾದಗಿರಿ (Yadgiri) ಜಿಲ್ಲೆಯ ಶಹಪುರ (Shahpura) ತಾಲ್ಲೂಕು ಪಂಚಾಯತಿ ವೀಡಿಯೊ ಎನ್ನಲಾಗುತ್ತಿದೆ. ಈ ವಿಡಿಯೋದಲ್ಲಿ ಸರ್ ಗೆ 3% ಎಂದು ಹೇಳಲಾಗಿದ್ದು, ಆ ಸರ್ ಯಾರು ಎಂಬ ಪ್ರಶ್ನೆ (Who is sir) ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಾಲ್ಲೂಕು ಪಂಚಾಯತಿಯಲ್ಲಿ ಕಾಮಗಾರಿ ಟೆಂಡರ್ ಪಡೆಯಬೇಕಾದರೆ 4% ಲಂಚ ಅಧಿಕಾರಿಗಳ ಜೇಬಿಗೆ ತುಂಬಿಸಬೇಕಾ ಎಂದು ಸಾರ್ವಜನಿಕರು ಮಾತನಾಡಿಕೊಳ್ಳತ್ತಿದ್ದಾರೆ.


[ays_poll id=3]