
K2 ಪೊಲಿಟಿಕಲ್ ನ್ಯೂಸ್ : ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಂಡವು ಮಾಡುತ್ತಿದೆ, ಇಂತಹ ಸಂದರ್ಭದಲ್ಲಿ ಈ ಒಂದು ಸಮಸ್ಯೆಯನ್ನು ನಿವಾರಣೆ ಮಾಡಬಾರದು ನಿಟ್ಟಿನಲ್ಲಿ ಯೋಚನೆ ಮಾಡುವುದನ್ನು ಬಿಟ್ಟು, ಲಾಟರಿ ಮಾರಾಟ ಮತ್ತೆ ಆರಂಭ ಮಾಡುವ ಯೋಚನೆ ಮಾಡುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಜೆಡಿಎಸ್ ಟ್ವಿಟ್ ಮೂಲಕ ಅಸಮಾಧಾನ ಹೊರಹಾಕಿದೆ.
ಉದ್ಯೋಗ ಸಮಸ್ಯೆಯ ಮುಸುಕಿನಲ್ಲಿ ಲಾಟರಿ ದಂಧೆ ಶುರು ಮಾಡುವ ಧಾವಂತದಲ್ಲಿರುವ ಹಾಗೆ ಕಾಣುವ ಬಿಜೆಪಿ ಸರ್ಕಾರ, ಇದರಲ್ಲೂ 40% ಕಮಿಷನ್ ಹವಣಿಸುತ್ತಿರಬೇಕು ಎಂದು ಜೆಡಿಎಸ್ ಕುಟುಕಿದೆ. ಈ ಕುರಿತು ಟ್ವಿಟ್ ಮಾಡಿರುವ ಜೆಡಿಎಸ್, ಇಂತಹ ಮನೆಮುರುಕ ಸಲಹೆ ನೀಡಿದ ಬೃಹಸ್ಪತಿ ಯಾರು? ರಾಜಕೀಯ ಇಚ್ಚಾಸಕ್ತಿ, ಜನಹಿತ ಸಿದ್ಧಾಂತ ಯಾವುದು ಇಲ್ಲದ ಬಿಜೆಪಿಗೆ ಕೆಲಸ, ಆದಾಯ ಹುಟ್ಟುಹಾಕಲು ಲಾಟರಿ ಮಾರಾಟವೊಂದೆ ದಾರಿಯಾ?. ಇಂತಹ ಕಳ್ಳದಾರಿ ಅಯೋಗ್ಯ ಬಿಜೆಪಿ ಸರ್ಕಾರಕ್ಕೆ ಮಾತ್ರ ಹೊಳೆಯುವುದು ಎಂದಿದೆ.
![]() |
![]() |
![]() |
![]() |
![]() |
[ays_poll id=3]