
K2 ನ್ಯೂಸ್ ಡೆಸ್ಕ್ : ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರು ಮತ್ತು ಸಲ್ಲಿಸಲು ಸಿದ್ಧರಾಗಿರುವವರಿಗೆ ಸರ್ಕಾರ ಶಾಕ್ ನೀಡಿದೆ. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ ಸರ್ಕಾರ ಇದರಿಂದ ಗ್ಯಾರಂಟಿ ಯೋಜನೆ ಎಲ್ಲಾ ಪಡೆಯುವ ನೂತನ ಅರ್ಜಿದಾರರ ಹಾಸಿಗೆ ತಣ್ಣೀರು ಎರಚಿದಂತಾಗಿದೆ.
ಚುನಾವಣೆಗೂ ಮುಂಚೆ ನೂತನ ಅರ್ಜಿಗಳನ್ನ ಸಲ್ಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು. ಇದುವರೆಗೂ ಆಒಂದು ಪ್ರಕ್ರಿಯೆ ಆರಂಭಿಸಲಾಗಿಲ್ಲ. ಪಡಿತರ ಚೀಟಿದಾರರಿಗೆ ಹೊಸ ಸದಸ್ಯರ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಸದ್ಯಕ್ಕೆ ತಿದ್ದುಪಡಿ ಹಾಗೂ ಸೇರ್ಪಡೆಗೆ ಮಾತ್ರ ಅವಕಾಶ ನೀಡಲಾಗಿದೆ. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಮುಂದಿನ ಆದೇಶದವರೆಗೆ ಯಾವುದೇ ಹೊಸ ಪಡಿತರ ಚೀಟಿಯನ್ನು ಮಂಜೂರು ಮಾಡದಂತೆ ಆದೇಶ ನೀಡಲಾಗಿದೆ. ಯಾವುದೇ ಹೊಸ ಪಡಿತರ ಚೀಟಿಗಳನ್ನು ಮಂಜೂರು ಮಾಡದಂತೆ ಆಹಾರ ಇಲಾಖೆಯಿಂದ ಆದೇಶ ನೀಡಲಾಗಿದೆ.
![]() |
![]() |
![]() |
![]() |
![]() |
[ays_poll id=3]