*ರಾಯಚೂರು ಬ್ರೇಕಿಂಗ್*
ಭೀಕರ ಬರಗಾಲಕ್ಕೆ ಸಾಕ್ಷಿಯಾಗುತ್ತಿದೆಯಾ ರಾಯಚೂರು ಜಿಲ್ಲೆ..
ಜಿಲ್ಲೆಯ ಹಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ..
ಮಳೆ ಕೊರತೆ ಹಿನ್ನಲೆಯಲ್ಲಿ ಖಾಲಿಯಾಗುತ್ತಿರುವ ಕೆರೆ ಕಟ್ಟೆಗಳು.
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನೀರಿನ ಅಭಾವ..
ಬಿಂದಿಗೆ ನೀರಿಗಾಗಿ ಇಡೀ ದಿನ ಕಾಯುವ ಪರೀಸ್ಥಿತಿ..
ನಗರದ ವಾರ್ಡ 5 ಬಸಲಿಂಗಪ್ಪ ಕಾಲೋನಿಯಲ್ಲಂತು ನೀರಿನ ಸಮಸ್ಯೆ ಹೇಳತೀರದು..
ಇಡೀ ಬಡಾವಣೆಗೆ ಒಂದೆ ನಳದ ಸಂಪರ್ಕ ಇದ್ದು ಅಲ್ಲಿ ಮಹಿಳೆಯರ ಕಿತ್ತಾಟ..
ನಾಲ್ಕು ತಿಂಗಳಿನಿಂದ ಸಮಸ್ಯೆ ಬಿಗಡಾಯಿಸುತ್ತಾ ಹೊಗುತ್ತಿದೆ..
ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೆ ನೀರೇ ಇಲ್ಲ ಎಲ್ಲಿಂದ ತರೋದು ಅಂತಾರಂತೆ..
ಪಟ್ಟಣ ಪಂಚಾಯತಿ ಅಧಿಕಾರಿ, ಸದಸ್ಯರುಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ..
ಮಳೆ ಅಭಾವ, ಖಾಲಿಯಾಗುತ್ತಿರುವ ಜಲಾಶಯ ಮುಂದಿನ ಬೀಕರ ಬರಗಾಲಕ್ಕೆ ಸಾಕ್ಷಿಯಾಗುತ್ತಿದೆಯಾ ಅನ್ನೊ ಅನುಮಾನ..