ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ತಿಂತಿಣಿ ಬ್ರಿಜ್ ಬಳಿ ಕಲಬುರ್ಗಿ ಘಟಕಕ್ಕೆ ಸೇರಿದ ಕೆಕೆಆರ್ಟಿಸಿ ಬಸ್ ಒಂದು ರಸ್ತೆ ಬದಿಗೆ ಪಲ್ಟಿ ಹೊಡೆಸ ಘಟನೆ ಜರುಗಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರಿಗೆ ಗಾಯವಾದ ಘಟನೆ ಭಾನುವಾರ ಬೆಳಗಿನ ಜಾವ ಐದು ಗಂಟೆಗೆ ಜರುಗಿದೆ ಎನ್ನಲಾಗುತ್ತಿದೆ.
ಲಿಂಗಸುಗೂರು ಕಡೆಯಿಂದ ಕಲಬುರ್ಗಿಗೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದ್ದು, ಈ ವೇಳೆ ಚಾಲಕನ ಮುಂಜಾಗ್ರತೆಯಿಂದ ಆಗಬಹುದಾದ ದೊಡ್ಡ ಅನಾಹುತ ಒಂದು ತಪ್ಪಿದೆ ಎನ್ನಲಾಗುತ್ತಿದೆ. ಹಟ್ಟಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು , ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.