
K2 ಪೊಲಿಟಿಕಲ್ ನ್ಯೂಸ್ : ಲಿಂಗಾಯತ ಸಮುದಾಯದಲ್ಲಿ ತುಂಬಾ ಜನ ಮುಖ್ಯಮಂತ್ರಿಗಳಾದರು, ಆದರೆ ಬಸವರಾಜ ಬೊಮ್ಮಾಯಿಯಂಥ ಭ್ರಷ್ಟ ಮುಖ್ಯಮಂತ್ರಿಯನ್ನು ಈ ಹಿಂದೆ ನೋಡಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದು ಇದೇ ವಿಚಾರಕ್ಕೆ ಸಿದ್ದರಾಮಯ್ಯ ಹೂಡಲಾಗಿದೆ.
ನಾನು 7 ಕೆಜಿ ಅಕ್ಕಿ ಕೊಡ್ತಿದ್ದೆ, ಬಿಜೆಪಿಯವರು ಅದನ್ನ 5 ಕೆಜಿಗೆ ಇಳಿಸಿದರು. ಯಾಕೆ ಹೀಗೆ ಕಡಿಮೆ ಮಾಡಿದ್ರಿ ಅಂತ ಯಡಿಯೂರಪ್ಪಗೆ ಕೇಳಿದೆ. ಕೊರೊನಾ ಬಂದಿದೆ. ನಮ್ಮ ಹತ್ತಿರ ದುಡ್ಡಿಲ್ಲ ಅಂದರು ಯಡಿಯೂರಪ್ಪ, ಲಂಚ ಹೊಡೆಯೋದು ಕಡಿಮೆ ಮಾಡಿ ಅಂತ ಹೇಳಿದೆ, ಅವರು ಕೇಳಲೇ ಇಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ : ಲಿಂಗಾಯತ ಸಿಎಂ ಭ್ರಷ್ಟಾಚಾರ ಎಸಗಿ ರಾಜ್ಯವನ್ನು ಹಾಳು ಮಾಡಿದ್ದಾರೆ ಎಂದಿದ್ದ ಸಿದ್ದರಾಮಯ್ಯ ಅವರ ಹೇಳಿಕೆ ವಿವಾದ ಸೃಷ್ಟಿಸಿತ್ತು. ಈ ಹೇಳಿಕೆ ಸಂಬಂಧ ಇದೀಗ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಶಂಕರ್ ಶೇಟ್ ಎನ್ನುವವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಇಂದು ಖಾಸಗಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಕೋರ್ಟ್ ಏಪ್ರಿಲ್ 29ಕ್ಕೆ ವಿಚಾರಣೆ ಮುಂದೂಡಿದೆ. ಈ ಹೇಳಿಕೆ ಕುರಿತು ಸಿದ್ದರಾಮಯ್ಯ ವಿರುದ್ಧ ಈಗಾಗಲೇ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ.
![]() |
![]() |
![]() |
![]() |
![]() |
[ays_poll id=3]