
ಲಿಂಗಸುಗೂರು : ಅಲ್ಪ ಮಳೆಗೆ ಜಲಾವೃತವಾದ ನೀರಲಕೇರಿ ಗ್ರಾಮದ ನೀರಿನಲ್ಲಿ ಹಾವು ಸೇರಿದಂತೆ ವಿಷಕಾರಿ ಜಂತುಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದರು ಗ್ರಾಮಕ್ಕೆ ಭೇಟಿ ನೀಡದ ಪಿಡಿಓ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರಾತ್ರಿ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮಕ್ಕೆ ನೀರುನುಗ್ಗಲು ಪಂಚಾಯಿತಿ ಪಿ ಡಿ ಓ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿ ಇದ್ದರೂ ಇಲ್ಲದಂತಾಗಿ
ಊರು ತುಂಬಾ ನೀರು ಬಂದು ಕೆರಿಯಂತಾಗಿದೆ ನೀರಲಕೇರಿ ಗ್ರಾಮ. ಮನೆಯಿಂದ ನೀರು ಹೊರ ಹಾಕಲು ಹರಸಹಸ ಪಡುತ್ತಿರುವ ಗ್ರಾಮಸ್ಥರು.
ಹೆಚ್ಚಿನ ಮಳೆ ಬಂದು ನೀರು ಬಂದರೆ, ನೀರು ಹರಿದು ಹೋಗಲು ಚರಂಡಿಗಳು ಇದ್ದರೂ ಸ್ವಚ್ಛ ಮಾಡದೇ ಇರುವ ಕಾರಣ ಮನೆಗಳಿಗೆ ನೀರು ನುಗ್ಗಿವೆ ಎನ್ನುತ್ತಾರೆ ಗ್ರಾಮಸ್ಥರು. ಕಳೆದ ಮೂರು ವರ್ಷಗಳಿಂದ ಗ್ರಾಮದಲ್ಲಿರುವ ಚರಂಡಿಗಳನ್ನು ಸ್ವಚ್ಛತೆ ಮಾಡಿಲ್ಲ. ಒಂದು ತಿಂಗಳ ಹಿಂದೆಯೇ ಪಿಡಿಓ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಆದ್ರೆ ಸ್ವಚ್ಛತೆ ಮಾಡಲಿಲ್ಲ , ಇದೀಗ ಬಂದಿರುವ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ ಎಂದು ಹೇಳುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]