
K2 ಕ್ರೈಂ ನ್ಯೂಸ್ : ತನ್ನ ಮಗುವನ್ನೇ ಮಹಡಿ ಮೇಲಿಂದ ಎಸೆದು ಕೊಂದಿದ್ದ ತಾಯಿ. ಮಗು ಕನಸನಲ್ಲಿ ಪದೇಪದೆ ಬಂದು ಕಾಡುತ್ತಿದ್ದರಿಂದ ಮಗುವನ್ನು ಕೊಂದಿರುವುದಾಗಿ ಬಹಿರಂಗಪಡಿಸಿ ಪತಿಯ ಮುಂದೆ ತಪ್ಪಿಸಿಕೊಂಡು ಜೈಲು ಸೇರಿದ ತಾಯಿ.
ನೆರೆಮನೆಯ ವ್ಯಕ್ತಿಯ ಜೊತೆ ಜ್ಯೋತಿ ರಾಥೋಡ್ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರು ಟೆರೆಸ್ ಮೇಲೆ ದೈಹಿಕ ಸಂಪರ್ಕ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮಗು ನೋಡಿತು. ಮಗು ನೋಡಿದ್ದರಿಂದ ತೊಂದರೆ ಆಗುತ್ತದೆ ಎಂದು ಭಾವಿಸಿ ತಾಯಿಯೇ ಟೆರೆಸ್ ಮೇಲಿಂದ ಮಗುವನ್ನು ಎಸೆದು ಕೊಂದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿತ್ತು. ಜ್ಯೋತಿ ನೆರೆಮನೆಯ ವ್ಯಕ್ತಿ ಉದಯ್ ಇನಾದುಲಿಯಾ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಜೊತೆಯಲ್ಲಿದ್ದಾಗ ನೋಡಿದ್ದಕ್ಕಾಗಿ ಮಗುವನ್ನು ಕೊಂದಿದ್ದಾಗಿ ಪತಿ ಧ್ಯಾನ್ ಸಿಂಗ್ ಮುಂದೆ ಒಪ್ಪಿಕೊಂಡಿದ್ದಾಳೆ. ಪತ್ನಿ ತಪ್ಪೊಪ್ಪಿಗೆ ಮಾಡಿಕೊಂಡಿದ್ದನ್ನು ವೀಡಿಯೋ ಮಾಡಿದ್ದು, ನಂತರ ಪೊಲೀಸರಿಗೆ ದೂರು ನೀಡಿ ವೀಡಿಯೊ ಹಸ್ತಾಂತರಿಸಿದ್ದಾರೆ.
ಎಲ್ಲರೂ ಮಗು ಆಕಸ್ಮಿಕವಾಗಿ ಕೆಳಗೆ ಬಿದ್ದಿತು ಎಂದು ಭಾವಿಸಿದ್ದರು. ಆದರೆ ಕೆಲವು ದಿನಗಳ ನಂತರ ಜ್ಯೋತಿ ಕೆಟ್ಟ ಕನಸುಗಳಿಂದ ಬೆಚ್ಚಿಬಿದ್ದು ಗಂಡನ ಬಳಿ ವಿಷಯ ಬಾಯಿ ಬಿಟ್ಟಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಜ್ಯೋತಿಯನ್ನು ವಶಕ್ಕೆ ಪಡೆದಿದ್ದಾರೆ.
![]() |
![]() |
![]() |
![]() |
![]() |
[ays_poll id=3]