This is the title of the web page
This is the title of the web page
Crime NewsState News

ಹೆತ್ತ ಮಕ್ಕಳ ಮೇಲೆ ತಾಯಿ ಮಾರಣಾಂತಿಕ ಹಲ್ಲೆ ಮಾಡಿ ಆತ್ಮಹತ್ಯೆ


K2 ಕ್ರೈಂ ನ್ಯೂಸ್ : ಹೆತ್ತ ಮಕ್ಕಳ ಮೇಲೆ ತಾಯಿಯೇ ಮಾರಣಾಂತಿಕ ಹಲ್ಲೆ ನಡೆಸಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಹಲ್ಲೆಯಿಂದ ಮಗಳು ಮೃತಪಟ್ಟಿದ್ದು, ಮಗನ ಸ್ಥಿತಿ ಗಂಭೀರವಾಗಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ತನ್ನ ಮಾತು ಕೇಳಲ್ಲ, ಮನೆಯಲ್ಲಿ ಯಾವುದೇ ಕೆಲಸ ಮಾಡಲ್ಲ ಎಂದು ತಾಯಿ ಬೇಗಮ್‌ಬಿ, ಮಕ್ಕಳೊಂದಿಗೆ ರಾತ್ರಿ ಜಗಳ ಮಾಡಿದ್ದಾಳೆ. ನಂತರ ಮುಂಜಾನೆ ಮಕ್ಕಳ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾಳೆ. ಇದರಿಂದ ಮಗಳು ಶಮಬಾನು (18) ಸ್ಥಳದಲ್ಲೇ ಮೃಯಪಟ್ಟಿದ್ದಾಳೆ. ಮಗ ಅಮಾನುಲ್ಲಾ (16) ಪ್ರಜ್ಞೆ ತಪ್ಪಿದೆ. ನಂತರ ತಾಯಿ ಬೇಗಮ್‌ಬಿ (45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಗ ಕೋಮದಲ್ಲಿದ್ದು, ಆತನನ್ನು ದಾವಣಗೆರೆ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯನಗರ ಎಸ್ಪಿ ಶ್ರೀಹರಿಬಾಬು ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ತಾಯಿ ಬೇಗಮ್‌ ಬಿ ಮಾನಸಿಕ ಅಸ್ವಸ್ಥಳಾಗಿದ್ದಳು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


[ays_poll id=3]