This is the title of the web page
This is the title of the web page
Local NewsVideo News

ಪೇದೆ ಮೇಲೆ ಶಾಸಕಿ ಪುತ್ರ ಹಲ್ಲೆ ಸುಳ್ಳು : ಪೊಲೀಸರಿಂದ ಎಡವಟ್ಟು ಆರೋಪ..?


K2kannadanews.in

mishandling by police ರಾಯಚೂರು : ಪೊಲೀಸ್ ಪೇದೆ (Police) ಹನುಮಂತ್ರಾಯ ಮೇಲೆ ಶಾಸಕಿ (MLA) ಕರೆಮ್ಮ ನಾಯಕ ಅವರ ಪುತ್ (Son) ಸಂತೋಷ ಹಲ್ಲೆ ಮಾಡಿರುವುದು ಶುದ್ಧ ಸುಳ್ಳು (Lie), ಇಲ್ಲಿ ಪೊಲೀಸರು ಎಡವಟ್ಟು (Mistek) ಮಾಡಿದ್ದಾರೆ ಎಂದು ಇಲಾಖೆ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ ದೇವದುರ್ಗ ಜೆಡಿಎಸ್ (JDS) ಮುಖಂಡ ಸಿದ್ದನಗೌಡ ಹೇಳಿದರು.

ದೊಂಡಂಬಳಿ ನಿವಾಸಿ ಮೌನೇಶ (Monesh) ಅಕ್ರಮ ಮರಳು (illegal sand) ಸಾಗಾಣಿಕೆಯಲ್ಲಿ ತೊಡಗಿರದಿದ್ದರೂ ಅವರ ಟ್ರ್ಯಾಕ್ಟರ್ ಗಳನ್ನು (Tractor) ಹಿಡಿದು ಠಾಣೆಗೆ ಕರೆದೊಯ್ಯುವಾಗ ಮೌನೇಶ ಮೇಲೆ ಹಲ್ಲೆ (Attack) ಮಾಡಿರುವ ವಿಷಯ ಗೊತ್ತಾಗಿ ಸತ್ಯಾಸತ್ಯತೆ ತಿಳಿಯಲು ಆ ವಿಚಾರವಾಗಿ ಪೇದೆಗೆ ಸಂಪರ್ಕಿಸಿ ಪ್ರವಾಸಿ ಮಂದಿರಕ್ಕೆ ಬರ ಹೇಳಲಾಗಿದೆ. ಪ್ರವಾಸಿ ಮಂದಿರಕ್ಕೆ ಪೇದೆ ಆಗಮಿಸುತ್ತಿದ್ದಂತೆ ದೊಂಡಂಬಳಿ ಗ್ರಾಮಸ್ಥರು ಹಾಗೂ ಪೇದೆ ನಡುವೆ ವಾದ ವಿವಾದ ನಡೆಯುತ್ತಿರುವುದನ್ನು ಪೂರ್ವ ನಿಯೋಜಿತ ರೀತಿಯಲ್ಲಿ ದೃಶ್ಯವನ್ನು ಸೆರೆ ಹಿಡಿಯಲಾಗಿದೆ ಎಂದರು.

ಹನುಮಂತ್ರಾಯ ಅವರ ಮೇಲೆ ಹಲ್ಲೆ ಮಾಡಿದ್ದು ಶಾಸಕಿ ಕರೆಮ್ಮ ಪುತ್ರ ಸಂತೋಷ ಮಾಡಿರುವುದು ಎಂದು ಬಿಂಬಿತವಾಗುತ್ತಿರುವುದು ಖೇದಕರ ಸಂಗತಿಯಾಗಿದ್ದು, ಅವರು ಯಾವುದೇ ರೀತಿಯಲ್ಲೂ ಅವರು ಹಲ್ಲೆ ಮಾಡಿಲ್ಲ. ಹಲ್ಲೆ ಮಾಡಿದವರೂ ಯಾರೆಂಬುದು ಹಲ್ಲೆಗೊಳಗಾದ ಪೇದೆಗೂ ತಿಳಿದಿಲ್ಲ. ವಾದ ವಿವಾದ ವೇಳೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಂತೋಷ ಪ್ರಯತ್ನ ಪಟ್ಟಿದ್ದಾರೆ. ಪೊಲೀಸ್ ಪೇದೆ ಸಮಾಧಾನ ಹೇಳಲು ಪ್ರಯತ್ನಿಸಿದಾಗಲೂ ಉದ್ದೇಶಪೂರ್ವಕವಾಗಿ ಶಾಸಕಿಯವರಿಗೆ ಹಾಗೂ ಅವರ ಮನೆಯವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಪೇದೆ ಪಾನಮತ್ತರಾಗಿ ಬೈದಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.


[ays_poll id=3]