This is the title of the web page
This is the title of the web page
Local News

ಕೈಗಾರಿಕಾ ಅಭಿವೃದ್ಧಿ ಪಡಿಸುವಲ್ಲಿ ಶಾಸಕ ಕೆ ಶಿವನಗೌಡ ನಾಯಕ ವಿಫಲ


ರಾಯಚೂರು : ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು ಕೈಗಾರಿಕಾ ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷತನ ಹಾಗೂ ಹಿಂದೇಟು ಹಾಕುತ್ತಿರುವುದರಿಂದ ಸಣ್ಣ ಉದ್ಯಮ ಮಾಡುವ ಯುವಕ ಯುವತಿಯರು ಹಿಂದುಳಿಯಲು ಕಾರಣವಾಗಿದೆ ಎಂದು ದೇವದುರ್ಗ ಕೈಗಾರಿಕಾ ಅಭಿವೃದ್ಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಲ್ಲಯ್ಯ ಕಟ್ಟಿಮನಿ ಆರೋಪಿಸಿದರು.

ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿ, ದೇವದುರ್ಗ ಕೈಗಾರಿಕಾ ಜಮೀನಿನಲ್ಲಿ ದೊಡ್ಡ ರಂಗಣ್ಣ ರವರು ಸದರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೈಗಾರಿಕಾ ಜಮೀನಿನಲ್ಲಿ ಬಾಡಿಗೆ ಕೊಟ್ಟಿದ್ದಾರೆ.
29-01-2022 ರಂದು ಏಕಗವಾಕ್ಷಿ ಅಧ್ಯಕ್ಷ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೈಗಾರಿಕೆ ಅಭಿವೃದ್ಧಿಪಡಿಸಲು, ಕೈಗಾರಿಕಾ ಜಮೀನಿನಲ್ಲಿ ಬೆಳೆದ ಜಂಗಲ್ ಕಟ್ಟಿಂಗ್, ಸ್ವಚ್ಛತೆ ಮಾಡಲು ತಕ್ಷಣ ಕ್ರಮವಹಿಸಿಲು ಆದೇಶ ಮಾಡಿದರೂ ಕೂಡ ಕೆ.ಐ.ಎ.ಡಿ.ಬಿ ಅಧಿಕಾರಿಗಳಾದ ಇಇ ಶ್ರೀಧರ್ ಎಇ. ಗೋವಿಂದನಾಯಕ ಮತ್ತು ಎ.ಇ.ಇ. ಜನಾರ್ಧನ ನಾಯಕ ರವರು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಫೆಬ್ರವರಿ 14 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.

ಸುಳ್ಳು ದಾಖಲಾತಿಗಳನ್ನು ನೀಡಿ, 2005ರ ಸಾಲಿನಲ್ಲಿ ಐತೀರ್ಪಿನಂತೆ ಸರ್ವೆ ನಂ. 195, ವಿಸ್ತೀರ್ಣ 12 ಎಕರೆ 03 ಗುಂಟೆ ಜಮೀನಿನ ಮೇಲೆಕೆ.ಐ.ಎ.ಡಿ.ಬಿ. ಇಲಾಖೆಯಿಂದ ಭೂ ಪರಿಹಾರದ ಹಣ ಪಡೆದುಕೊಂಡಿದ್ದಾರೆ. ಈಗಾಗಲೆ 1983 ರಿಂದ 1985 ರ ಸಾಲಿನಲ್ಲಿ ರಂಗಣ್ಣ ಮತ್ತು ಇವರ ತಂದೆಯಾದ ಭೀಮಣ್ಣ ಇವರ ಪಟ್ಟಾ, ಹೆಸರಿನಲ್ಲಿ ಇರುವಾಗ ಸದರಿ ಸರ್ವೆ ನಂಬರಿನಲ್ಲಿ ಒಟ್ಟು 03 ಎಕರೆ 01 ಗುಂಟೆ ಜಮೀನು ವೀರಭದ್ರಪ್ಪ ಗಣೇಕಲ್ ಸಾಕೀನ್: ದೇವದುರ್ಗ ಇವರಿಗೆ ಖರೀದಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.


[ays_poll id=3]