
ರಾಯಚೂರು : ಶಾಸಕಾಂಗ, ಕಾರ್ಯಂಗ, ನಾಯ್ಯಾಂಗ ಇರುವ ಮಹತ್ವ ಪತ್ರಿಕಾ ರಂಗಕ್ಕೆ ಇದೆ ಇಂದು ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗಿದೆ ನಿಜ ಸುದ್ದಿ ಗಿಂತ ಸುಳ್ಳು ಸುದ್ದಿಗಳಿಗೆ ಜನರು ಮಾರು ಹೋಗುತ್ತಿದ್ದಾರೆ ಇದು ಹೋಗಲಾಡಿಸಲು ನಿಜ ಸುದ್ದಿಗಳನ್ನು ಬರೆದು ಪತ್ರಿಕಾ ರಂಗ ಉಳಿಸಬೇಕಾಗಿದೆ ಎಂದು ವೈದ್ಯಕೀಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ,ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಮ್ಮ ಸರ್ಕಾರ ಪತ್ರಕರ್ತರ ಪರವಾಗಿ ಕೆಲಸ ಮಾಡುವ ಜೊತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕವಾಗಿ ಕೆಲಸ ಮಾಡುತ್ತೇವೆ ಎಂದರು. ಪತ್ರಕರ್ತರ ನೀವೇಷನ, ಮನೆ ಜಾಹೀರಾತು ಪೆನೆಷನ್, ಬಸ್ ಪಾಸ್, ಯಶ್ವನಿ ಯೋಜನೆ ಸೇರಿದಂತೆ ಸರ್ಕಾರದಿಂದ ಸಿಗುವ ಸೌಲಭ್ಯ ಗಳನ್ನು ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಜಿಲ್ಲೆಗೆ ಏಮ್ಸ್ ಮಂಜೂರ ಮಾಡುವಂತೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮೇಲೆ ಒತ್ತಡ ಹಾಕಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ರಾಜ್ಯ ಸರ್ಕಾರದ ನಿಯೋಗ ದೆಹಲಿಗೆ ಹೋಗಿ ಸಂಬಂಧಿಸಿದ ಮಂತ್ರಿಗಳನ್ನು ಬೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದರು. ಪತ್ರಿಕಾ ರಂಗ ಉಳಿದರೆ ಪ್ರಜಾಪ್ರಭುತ್ವ ಉಳಿಯುತ್ತದೆ ಆದ್ದರಿಂದ ಪತ್ರಿಕಾ ರಂಗವನ್ನು ಉಳಿಸಿ ಬೆಳೆಸಿಕೊಂಡು ಹೊಗುವದು ಎಲ್ಲರ ಜವಾಬ್ದಾರಿಯಾಗಿದೆ. ಜಿಲ್ಲೆಯ ಏನೆ ಸಮಸ್ಯೆಗಳು ಇದ್ದರು ಸಹ ನನ್ನ ಗಮನಕ್ಕೆ ತಂದರೆ ಪರಿಹರಿಸುವ ಕೆಲಸ ಮಾಡುತ್ತೇನೆ ಎಂದರು.
![]() |
![]() |
![]() |
![]() |
![]() |
[ays_poll id=3]