This is the title of the web page
This is the title of the web page
State News

ಮೇ. 24ರ ಒಳಗಾಗಿ ಹೊಸ ಸರ್ಕಾರ ರಚನೆ


K2 ನ್ಯೂಸ್ ಡೆಸ್ಕ್ : ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ 2023ಯಲ್ಲಿ ಶೇ. 80ರಷ್ಟು ಹೆಚ್ಚಿನ ಮತದಾನವಾಗುವ ನಿರೀಕ್ಷೆ ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮಾಹಿತಿ ನೀಡಿದರು.

ಮೇ. 24ರ ಒಳಗಾಗಿ ಹೊಸ ಸರ್ಕಾರ ರಚನೆಯಾಗಬೇಕಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 5.21 ಕೋಟಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಗ್ರಾಮಾಂತರದಲ್ಲಿ ಈ ಬಾರಿ ಶೇ. 80ರಷ್ಟು ಹೆಚ್ಚಿನ ಮತದಾನವಾಗುವ ನಿರೀಕ್ಷೆ ಇದೆ. ಇನ್ನು ಚುನಾವಣಾ ಸಮಾವೇಶಗಳಿಗೆ ಆನ್‌ಲೈನ್‌ನಲ್ಲೂ ಅನುಮತಿಗೆ ಅರ್ಜಿ ಸಲ್ಲಿಸಬಹುದು. ನಾಮಪತ್ರ ಆನ್‌ಲೈನ್‌ನಲ್ಲೂ ಸಲ್ಲಿಸುವ ಅವಕಾಶವಿದೆ ಎಂದು ಹೇಳಿದ್ದಾರೆ. 2.62 ಕೋಟಿ ಪುರುಷ ಮತದಾರರು ರಾಜ್ಯದಲ್ಲಿದ್ದರೆ, ಮಹಿಳಾ ಮತದಾರರು 2.59 ಕೋಟಿ ಇದ್ದಾರೆ. ಅದರೊಂದಿಗೆ ರಾಜ್ಯದಲ್ಲಿ 100 ವರ್ಷ ಮೇಲ್ಪಟ್ಟ 16, 796 ಮತದಾರರಿದ್ದಾರೆ. ಕಳೆದ ಬಾರಿ ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗಿತ್ತು. ಈ ಬಾರಿ ಮತದಾನ ಪ್ರಮಾಣವನ್ನು ಏರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. ಈ ನಡುವೆ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುವಂತೆ ಮನವಿ ಬಂದಿದ್ದು, ಈ ಕುರಿತಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 4,699 ತೃತೀಯ ಲಿಂಗಿ ಮತದಾರರಿದ್ದಾರೆ. 9.17 ಲಕ್ಷ ಮಂದಿ ಇದೇ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಇನ್ನೂ 80 ವರ್ಷಕ್ಕಿಂತ ಹೆಚ್ಚಿನ 12.15 ಲಕ್ಷ ಮತದಾರರಿದ್ದರೆ. 5.55 ಲಕ್ಷ ವಿಕಲಚೇತನ ಮತದಾರರಿದ್ದಾರೆ. ಮೊದಲ ಬಾರಿಯ ಮನೆಯಲ್ಲೇ‌ ಮತದಾನ ಮಾಡುವ ಅವಕಾಶವನ್ನೂ ಈ ಬಾರಿ ನೀಡಲಾಗುತ್ತದೆ. 80 ವರ್ಷ ಮೇಲ್ಪಟ್ಟಿರುವ ಮತ್ತು ವಿಕಲಚೇತನರಿಗೆ ಮನೆಯಲ್ಲೇ ಮತದಾನದ ‌ಮಾಡುವ ಅವಕಾಶ ಇರಲಿದೆ. ಮತಗಟ್ಟೆಗೆ ಬರಲು ಸಾದ್ಯವಾಗದವರಿಗೆ ವಯೋವೃದ್ದರು, ಅಂಗವಿಕಲರಿಗೆ ಮನೆಯಲ್ಲೇ ವೋಟಿಂಗ್ ಸೌಲಭ್ಯ ಇರಲಿದೆ ಎಂದು ಮಾಹಿತಿ ನೀಡಿದರು.


[ays_poll id=3]