This is the title of the web page
This is the title of the web page
international News

35 ಸಾವಿರ ಅಡಿ ಎತ್ತರದಲ್ಲಿ ಸಿಡಿಲು ಕಾಣಿಸಿಕೊಂಡರೆ ಹೇಗಿರುತ್ತದೆ..!


K2 ನ್ಯೂಸ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಎಂದರೆ ಸಾಮಾಜಿಕ ಜಾಲತಾಣ, ನಂಬಲಾಗದಂತಹ ಹಲವು ವಿಚಾರಗಳು ನಮ್ಮ ಕಣ್ಮುಂದೆ ತರುತ್ತಿರುತ್ತವೆ. ಅಂತಹದ್ದೇ ಒಂದು ಪ್ರಕೃತಿ ವಿಸ್ಮಯದ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪರಂ ಎಂಬುವವರು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು,35 ಸಾವಿರ ಅಡಿ ಎತ್ತರದಲ್ಲಿ ಸಿಡಿಲು ಕಾಣಿಸಿಕೊಂಡರೆ ಹೇಗಿರುತ್ತದೆ ಎಂಬ ಬಗ್ಗೆ ಯೋಚಿಸಿದ್ದೀರ ಎಂದು ಪ್ರಶ್ನಿಸಿದ್ದಾರೆ. ಈ ವೀಡಿಯೋದಲ್ಲಿ ಇಡೀ ಆಕಾಶವನ್ನು ಬೆಳಗುವಂತೆ ಮಿಂಚಿನ ತೀವ್ರವಾದ ಸ್ಫೋಟಗಳೊಂದಿಗೆ ವೀಡಿಯೊ ಆರಂಭವಾಗುತ್ತದೆ, ಅನೇಕ ವೀಕ್ಷಕರು ಗುಡುಗು ಸಹಿತ ಕಾಣಿಸಿಕೊಂಡ ಈ ಸಿಡಿಲಿನ ತೀವ್ರತೆಗೆ ವಿಸ್ಮಯಗೊಂಡಿದ್ದಾರೆ.


[ays_poll id=3]