This is the title of the web page
This is the title of the web page
Politics News

ಎಲ್ಲರಿಗೂ ಅವಕಾಶ ಕಲ್ಪಿಸಿ ಬೆಳೆಯುವುದೇ ಕಾಯಕ : ಸಿಎಂ


K2 ಪೊಲಿಟಿಕಲ್ ನ್ಯೂಸ್ : ಕಾಯಕ ಮತ್ತು ಕರ್ತವ್ಯದ ನಡುವೆ ವ್ಯತ್ಯಾಸ ಇದ್ದು, ಕರ್ತವ್ಯ ನಮಗೋಸ್ಕರ ಮಾಡುವುದು, ನಮ್ಮೊಂದಿಗೆ ಬೇರೆಯವರಿಗೂ ಅವಕಾಶ ಕಲ್ಪಿಸಿ ಎಲ್ಲರೂ ಒಟ್ಟಾಗಿ ಬೆಳೆಯುವುದು ಕಾಯಕ, ಬಸವಣ್ಣನವರು ಕಾಯಕವೇ ಕೈಲಾಸ ಎಂಬುದು ಇದೇ ಚಿಂತನೆಯನ್ನು ಒಳಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಾಮಾನ್ಯವಾಗಿ ಒಂದು ಸಮುದಾಯವನ್ನು ಕಟ್ಟುವಾಗ ಬಹುತೇಕ ಹಿರಿಯರು ಇರುತ್ತಾರೆ. ಆದರೆ, ಇಲ್ಲಿ ಯುವಕರೇ ಮುಂದೆ ಬಂದು ಸಮುದಾಯ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ಸಂಘ ಪ್ರಾಂಜಲ ಮನಸಿನಿಂದ ಸ್ಥಾಪಿಸಿದ್ದಾರೆ. ಅವರಿಗೆ ಯಾವುದೇ ಮಾರ್ಗದರ್ಶನ ಬೇಕಿಲ್ಲ. ನಿಮ್ಮ ಆತ್ಮಸಾಕ್ಷಿಗೆ ತಕ್ಕಹಾಗೆ ಕೆಲಸ ಮಾಡಿ, ಬಸವಣ್ಣನವರು ಕಾಯಕವೇ ಕೈಲಾಸ ಅಂದರು. ದುಡ್ಡೆ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ, ನಮ್ಮ‌ನಾಯಕರಾದ ಯಡಿಯೂರಪ್ಪನವರು ಪರಿಶ್ರಮದಿಂದ ಬೆಳೆದಿದ್ದಾರೆ‌.

ಅವರು ಕೇವಲ ಮುಖ್ಯಮಂತ್ರಿಯಷ್ಟೆ ಆದವರಲ್ಲ, ಅವರೊಬ್ಬ ನಾಯಕ, ಜನರ ಮನಸಿನಲ್ಲಿ ಉಳಿಯುವವರೇ ನಿಜವಾದ ನಾಯಕ. ಯಡಿಯೂರಪ್ಪ ಅವರೇ ನಮ್ಮ ರೋಲ್ ಮಾಡೆಲ್ ಎಂದರು.

ನಿರಂತರ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ : ನಮ್ಮ ಸಮುದಾಯದಲ್ಲಿ ಅನೇಕ ಉದ್ಯಮಿಗಳಿದ್ದಾರೆ. ವಿಜಯ್ ಸಂಕೇಶ್ವರ್ , ಮುರುಗೇಶ್ ನಿರಾಣಿ, ಪ್ರಭಾಕರ್ ಕೊರೆ ಎಲ್ಲರೂ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಸಣ್ಣ ಸಣ್ಣ ಉದ್ಯಮ ‌ಮಾಡಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ‌. ನಮ್ಮದು ರೈತಾಪಿ ಸಮಾಜ, ಮಣ್ಣಿನ ಜೊತೆ ನಮ್ಮ ಸಂಬಂಧ, ಯಾರು ಮಣ್ಣಿನ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾರೊ ಅವರು ಪ್ರಾಮಾಣಿಕರಾಗಿರುತ್ತಾರೆ‌. ಗುಡ್ಡಗಾಡು ಜನರು ಬಲಿಷ್ಟರಾಗಿರುತ್ತಾರೆ.

ಕರಾವಳಿ ಜನರು ಸಾಹಸಿಗಳಾಗಿರುತ್ತಾರೆ. ಲಿಂಗಾಯತ ಸಮುದಾಯವನ್ನು ದುಡಿಮೆಯೇ ಕಾಪಾಡುತ್ತದೆ. ಲಕ್ ಅನ್ನುವುದು ಇಲ್ಲ. ನಿರಂತರ ಶ್ರಮ ವಹಿಸಿದಾಗ ಮಾತ್ರ ಪ್ರತಿಫಲ ಸಿಗುತ್ತದೆ. ಸಮಾಜಕ್ಕೆ ಏನು ಬೇಕೊ ಅದಕ್ಕೆ ಸರ್ಕಾರ ಬೆಂಬಲವಾಗಿ ನಿಲ್ಲುತ್ತದೆ. ಬಸವ ಕಲ್ಯಾಣ, ಕೂಡಲ ಸಂಗಮ ಅಭಿವೃದ್ದಿ ಮಾಡುತ್ತಿದ್ದೇವೆ. ಸಮಾಜಕ್ಕೆ ಏನು ಬೇಕೊ ಎಲ್ಲವನ್ನು ನೀಡಲು ಸರ್ಕಾರ ಸಿದ್ದವಿದೆ ಎಂದರು.


[ays_poll id=3]