
K2 ನ್ಯೂಸ್ ಡೆಸ್ಕ್ : ಕೆಕೆಆರ್‌ಟಿಸಿ ಆರಂಭವಾಗಿ 23 ವರ್ಷಗಳ ಬಳಿಕ ಮೊದಲ ಬಾರಿಗೆ ಕಲ್ಯಾಣ ರಥ ಹೆಸರಿನ ಹಂಪಿ ಕಲ್ಲಿನ ರಥದಿಂದ ಆಕರ್ಷಿಕವಾಗಿ ಸಿಂಗಾರಗೊಂಡ ಐಷಾರಾಮಿ ವೋಲ್ವೊ ಮಲ್ಟಿ ಆಕ್ಸೆಲ್ ಎ.ಸಿ. ಸ್ಲೀಪರ್ ಬಸ್ ಸೇವೆಯನ್ನು ಇಂದು ಸಿಂಧನೂರಿನಿಂದ ಆರಂಭಿಸಲಿದೆ. ಕೆಕೆಆರ್ಡಿಬಿ 330 ಕೋಟಿ ವೆಚ್ಚದಲ್ಲಿ ಎಸಿ ನಾನು ಎಸಿ ಸೇರಿದಂತೆ ಸಾಮಾನ್ಯ ಬಸ್ಸುಗಳನ್ನು ಕೂಡ ಖರೀದಿಸಲಾಗುತ್ತಿದೆ.
ಕೆಕೆಆರ್ಡಿಬಿ 40 ಕೋಟಿ ಅನುದಾನ ಹಾಗೂ ಬ್ಯಾಂಕಿನಿಂದ 330 ಕೋಟಿ ಸಾಲ ಪಡೆದ ವೆಚ್ಚದಲ್ಲಿ 6 ವೋಲ್ವೊ, 30 ನಾನ್ ಎ.ಸಿ. ಸ್ಲೀಪರ್ ಸೇರಿದಂತೆ 802 ಬಸ್‌ಗಳನ್ನು ಖರೀದಿಸುತ್ತಿದೆ. ಮೊದಲ ಹಂತದಲ್ಲಿ 380ಕ್ಕೂ ಅಧಿಕ ಎಕ್ಸ್‌ಪ್ರೆಸ್ ಬಸ್ ಹಾಗೂ ಎರಡು ವೋಲ್ವೊ ಮಲ್ಟಿ ಆಯಕ್ಸೆಲ್ ಸ್ಲೀಪರ್ ಬಸ್‌ಗಳು ನಿಗಮಕ್ಕೆ ಬಂದಿವೆ. ರಾಯಚೂರು ಜಿಲ್ಲೆಯಿಂದ ಸದ್ಯಕ್ಕೆ ನಿಗಮದಿಂದ ಎ.ಸಿ. ಬಸ್ ಸೇವೆ ಇಲ್ಲ. ಹೀಗಾಗಿ ಮೊದಲ ಎರಡು ಬಸ್‌ಗಳು ರಾಯಚೂರಿನ ಸಿಂಧನೂರಿನಿಂದ ಸಂಚರಿಸಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪ್ರತಿ ದಿನ ರಾತ್ರಿ 10ಕ್ಕೆ ಸಿಂಧನೂರಿನಿಂದ ಹೊರಡುವ ಬಸ್ ಮರುದಿನ ಬೆಳಿಗ್ಗೆ 5.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ನಿತ್ಯ 10.15ಕ್ಕೆ ಹೊರಟು ಮರುದಿನ ಬೆಳಿಗ್ಗೆ 5.45ಕ್ಕೆ ಸಿಂಧನೂರು ತಲುಪಲಿದೆ. ಸಿಂಧನೂರಿನಿಂದ ಬೆಂಗಳೂರಿಗೆ ₹ 1250 ಪ್ರಯಾಣದರ ನಿಗದಿಪಡಿಸಲಾಗಿದೆ. 28ರಿಂದ ರಾತ್ರಿ ಒಂದು ಬಸ್ ಸಿಂಧನೂರಿನಿಂದ ಹೊರಟರೆ, ಮತ್ತೊಂದು ಬಸ್ ಬೆಂಗಳೂರಿನಿಂದ ಸಿಂಧನೂರಿಗೆ ಬರಲಿದೆ. ಒಂದು ತಿಂಗಳಲ್ಲಿ ನಾಲ್ಕು ವೋಲ್ವೊ ಬಸ್‌ಗಳು ನಿಗಮಕ್ಕೆ ಸೇರ್ಪಡೆಯಾಗಲಿದ್ದು, ಅವುಗಳನ್ನು ಕಲಬುರಗಿ ಹಾಗೂ ವಿಜಯಪುರದಿಂದ ಓಡಿಸುವ ಸಾಧ್ಯತೆ ಇದೆ.
![]() |
![]() |
![]() |
![]() |
![]() |
[ays_poll id=3]