This is the title of the web page
This is the title of the web page
Local NewsVideo News

ನ.8 ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯರ ಜಿಲ್ಲಾ ಸಮಾವೇಷ


ರಾಯಚೂರು : ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯರ ರಾಯಚೂರು ಜಿಲ್ಲಾ ಸಮಾವೇಶವನ್ನು ನವೆಂಬರ್ 8ರಂದು ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನ ರಾಜ್ಯಾದ್ಯಕ್ಷ ವೈದ್ಯ ಆನಂದಯ್ಯ ಹೇಳಿದರು.

ಭಾರತೀಯ ವೈದ್ಯ ಪದ್ಧತಿಯಮೂಲ ತಳಹದಿಯಾದ ಪಾರಂಪರಿಕ (ನಾಟಿ) ವೈದ್ಯ ಪದ್ಧತಿಯನ್ನು ಉಳಿಸುವ ಹಾಗೂ ಮುಂದಿನ ತಲೆಮಾರಿಗೆ ಕೊಂಡೋಯ್ಯುವ ದೃಷ್ಟಿಕೋನ ಇಟ್ಟುಕೊಂಡು, ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಕಲ್ಯಾಣ ಕರ್ನಾಟಕ, ಭಾಗದ 7 ಜಿಲ್ಲೆಗಳ ವೈದ್ಯರನ್ನು ಸಂಘಟಿಸಿ ಎಲ್ಲಾ ಜಿಲ್ಲೆಗಳ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಂಡ ಸಂಘಟಿತರನ್ನಾಗಿ ಮಾಡುವ ಮೂಲಕ ಅವರಲ್ಲಿರುವ ವೈದ್ಯದ ಜ್ಞಾನವನ್ನು ಹಂಚಿಸಿಕೊಂಡು ಪಾರಂಪರಿಕ ವೈದ್ಯ ಪರಂಪರೆಯನ್ನು ಮುಂದುವರೆಸಲು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು, ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ವೈದ್ಯರಿಗೆ ದೇಹದ ಅಂಗರಚನೆ ರೋಗದ ಕಾರಣ, ರೋಗದ ಲಕ್ಷಣ ಹಾಗೂ ನಾಡಿ ಪರೀಕ್ಷೆಗಳ ಬಗ್ಗೆ ಆರ್ಯುವೇದ್ ಕಾಲೇಜಿನ ನುರಿತ ಹಿರಿಯ ಎಂ.ಡಿ. ಡಾಕ್ಟರ್‌ಗಳಿಂದ ತರಬೇತಿಗಳನ್ನು ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಔಷಧಿ ಕಾರ್ಯಾಗಾರಗಳನ್ನು ಮಾಡುವ ಮೂಲಕ ವೈದ್ಯರಿಗೆ ಔಷಧಿ ತಯಾರಿಸುವ ಪದ್ಧತಿಯನ್ನು ಸಂಪೂರ್ಣವಾಗಿ ಕಲಿಸಿಕೊಡುವ ಪ್ರಯತ್ನವನ್ನು ಪರಿಷತ್ತು ಮಾಡುತ್ತದೆ ನಂತರ ದಿನಗಳಲ್ಲಿ ರಸ ವೈದ್ಯದಲ್ಲಿ ಆಸಕ್ತಿವುಳ್ಳ ವೈದ್ಯರಿಗೆ ಗುರು ಶಿಷ್ಯ ಪರಂಪರೆಯಲ್ಲಿ ಔಷಧಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಪಾರಂಪರಿಕವಾಗಿ ಬಂದ ವೈದ್ಯ ವಿದ್ಯೆಯನ್ನು ಮುಂದುವರೆಸುತ್ತಾ ಅವರು ಒಬ್ಬ ಪರಿಪೂರ್ಣ ವೈದ್ಯರಾಗಲು ಪರಿಷತ್‌ ಶ್ರಮಿಸುತ್ತದೆ. ಈ ರೀತಿಯ ಜಿಲ್ಲಾ ಸಮಾವೇಶವನ್ನು ಮಾಡಿ ನಂತರ 7 ಜಿಲ್ಲೆಗಳನ್ನು ಒಗ್ಗೂಡಿಸಿ ಮೂರು ದಿನಗಳ ಸಮ್ಮೇಳನವನ್ನು ಮಾಡಿ ಸರಕಾರದ ಗಮನ ಸೆಳೆಯುವ ಮೂಲಕ ವೈದ್ಯರಿಗೆ ಸೂಕ್ತ ಗೌರವ ಸ್ಥಾನಮಾನಗಳನ್ನು ನೀಡುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಸರಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಪ್ರಯತ್ನವನ್ನು ಪರಿಷತ್‌ ಮಾಡುತ್ತದೆ. ಇಂತಹ ಮಹತ್ವದ ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲೆಯ ಎಲ್ಲಾ ವೈದ್ಯ ಬಾಂಧವರು ಆಗಮಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು. ಹೊಸ ನೋಂದಣಿ ಮಾಡಿಕೊಳ್ಳುವವರು 9945772585 ಸಂಪರ್ಕಿಸಲು ಕೋರಿದರು.

 


[ays_poll id=3]