
ರಾಯಚೂರು : ಜೆಡಿಎಸ್ ಪಕ್ಷದವರಿಗೆ ಯಾವುದೇ ಕೆಲಸವಿಲ್ಲ, ಯಾವುದೇ ಸರ್ಕಾರ ಇದ್ದರೂ ವಿಷಯವಿಲ್ಲದೆ ಆರೋಪ ಮಾಡುತ್ತಾರೆ. ರಾಜಕೀಯ ಅಧಿಕಾರ ಇರುವವರ ತೇಜೋವಧೆ ಮಾಡುವ ಕೆಲಸ ಮಾಡುತ್ತಾರೆ ಎಂದು ಸಣ್ಣ ನೀರಾವರಿ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜ್ ಅಸಮಾಧಾನ ವ್ಯಕ್ತಪಡಿಸಿದರು
ರಾಯಚೂರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಚಿವ ಎನ್ ಎಸ್ ಬೋಸರಾಜ್ ಅವರ ಪುತ್ರ ಅಕ್ರಮ ಮರಳುಗಾರಿಕೆ ಮಾಡುತ್ತಾರೆ ಎಂಬ ಜೆಡಿಎಸ್ ಜಿಲ್ಲಾಧ್ಯಕ್ಷರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮಗೆ ಅಂತ ಕೆಲಸ ಮಾಡುವ ಅವಶ್ಯಕತೆ ಇಲ್ಲ, 50 ವರ್ಷದ ರಾಜಕೀಯದಲ್ಲಿ ಆ ಕೆಲಸ ಮಾಡಿಲ್ಲ. ಪ್ರಸ್ತುತ ಅವರಿಗೆ ಆರೋಪಿಸಲು ಯಾವುದೇ ವಿಷಯ ಇಲ್ಲದಿರುವುದರಿಂದ ಹೀಗೆ ಆರೋಪಿಸುತ್ತಿದ್ದಾರೆ ಎಂದರು.
ಯಾರು ಏನೇ ಆರೋಪ ಮಾಡಿದರು ಅದಕ್ಕೆ ಸಾಕ್ಷಿ, ಆಧಾರಗಳು ಇಟ್ಟುಕೊಂಡು ದೂರು ನೀಡುವ ಕೆಲಸ ಮಾಡಬೇಕು. ಜೆಡಿಎಸ್ ಪಕ್ಷದ ರಾಜ್ಯಮಟ್ಟದ ನಾಯಕರಾಗಲಿ, ಜಿಲ್ಲಾ ಮಟ್ಟದ ನಾಯಕರೇ ಆಗಲಿ, ಯಾವುದೇ ಕೆಲಸ ಇಲ್ಲದರುವುದರಿಂದ ರಾಜಕೀಯವಾಗಿ ತೇಜೋವಧೆ ಮಾಡಲು ಇಂತಹ ಕೆಲಸ ಮಾಡುತ್ತಾರೆ. ಈಗಾಗಲೇ ಸಿದ್ದರಾಮಯ್ಯ ಅವರು ಹೇಳಿದಂತೆ ಎಲ್ಲಾ ಆರೋಪಗಳು ಹಿಟ್ ಅಂಡ್ ರನ್ ಕೇಸ್ ಇದ್ದಂತೆ ಎಂದರು.
![]() |
![]() |
![]() |
![]() |
![]() |
[ays_poll id=3]