
ರಾಯಚೂರು : ಜೆಡಿಎಸ್ ಸರ್ಕಾರ ಅದು ಭ್ರಷ್ಟ ಸರ್ಕಾರ, ಅವರ ಸರ್ಕಾರ ಇದ್ದಾಗ ಈ ಹಿಂದೆ ಯಾವ ರೀತಿ ಆಡಳಿತ ನಡೆದಿದೆ ಅನ್ನೋದು ಗೊತ್ತಿದೆ ಎಂದು ಎಚ್ ಡಿಕೆ ವಿರುದ್ಧ ವೈದ್ಯಕೀಯ ಹಾಗೂ ರಾಯಚೂರು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಿಡಿ.
ಸಿಂಧನೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿಕೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಎಚ್ ಡಿಕೆ ವಿರುದ್ಧ ವೈದ್ಯಕೀಯ ಕಿಡಿ ಕಾರಿದ್ದಾರೆ. ಕುಮಾರಸ್ವಾಮಿ ಅವ್ರು ಅಸಂಬಂಧ ಹೇಳಿಕೆ ಹೇಳ್ತಾರೆ. ಅವರ ಸರ್ಕಾರ ಇದ್ದಾಗ, ಈ ಹಿಂದೆ ಯಾವ ರೀತಿ ಆಡಳಿತ ನಡೆದಿದೆ ಅನ್ನೋದು ಗೊತ್ತಿದೆ. ಜೆಡಿಎಸ್ ಸರ್ಕಾರ ಇದ್ದಾಗಲೆಲ್ಲಾ ಅದು ಭ್ರಷ್ಟ ಸರ್ಕಾರ ಅದು. ನಾನು ಸ್ಪಷ್ಟವಾಗಿ ಹೇಳ್ಬೇಕು ಅನ್ನೊ ಅವಶ್ಯಕತೆ ಇಲ್ಲ.
ನಮ್ಮ ಜೊತೆ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ರು. ಕಾಂಗ್ರೆಸ್ ನಿಂದಲೇ ಸಿಎಂ ಆಗಿದ್ರು. ಸರ್ಕಾರ ಉಳಿಸಿಕೊಳ್ಳಲು ಆಗ್ಲಿಲ್ಲ, ಸರ್ಕಾರ ಹೋಯ್ತು ಅನ್ನೋ ಹತಾಶೆಯಲ್ಲಿ ಹೇಳ್ತಿದ್ದಾರೆ. ಅವ್ರಿಗೆ ನಿರೀಕ್ಷೆ ತಕ್ಕ ಫಲಿತಾಂಶ ಬರಲಿಲ್ಲ. ನಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ವಿಲ್ಲ ಅಂತ ಆಕ್ರೋಶ ಏನೇನೋ ಹೇಳುತ್ತಿದ್ದಾರೆ ಎಂದರು.
![]() |
![]() |
![]() |
![]() |
![]() |
[ays_poll id=3]