
ರಾಯಚೂರು : ರಾಜ್ಯದಲ್ಲಿ ಆಡಳಿತ ನಡೆಸಿರುವ ಜೆಸಿಬಿ ಪಕ್ಷಗಳು ದಿನೇದಿನೇ ಭ್ರಷ್ಟಾಚಾರ ಹೆಚ್ಚಿಸಿವೆ ಹೊರತು ಅಭಿವೃದ್ಧಿಯನ್ನು ಹೆಚ್ಚಿಸಿಲ್ಲ ಎಂದು ಆಮ್ ಆದ್ಮಿ ಪಕ್ಷದ ಗ್ರಾಮಾಂತರ ಅಭ್ಯರ್ಥಿ ಡಾ. ಸುಭಾಷ್ ಚಂದ್ರ ಸಂಭಾಜಿ ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು ಗ್ರಾಮಾಂತರ ಕ್ಷೇತ್ರದ ಮನ್ಸಲಾಪುರ, ಜಾಗಿರಮರ್ಚೆಡ, ಜಗರಕಲ್, ಜೆ ಮಲ್ಲಾಪುರ, ಹೊಸಪೇಟೆ ಹೆಂಬರಾಳ ಗ್ರಾಮದಲ್ಲಿ ಪ್ರಚಾರ ನಡೆಸಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ, ಮೂರು ಪಕ್ಷಗಳಿಗೆ ಅಧಿಕಾರ ಕೊಟ್ಟಿದ್ದೀರಿ ಯಾವುದೇ ಅಭಿವೃದ್ಧಿ ಆಗಿಲ್ಲ, ಒಮ್ಮೆ ಆಮ್ ಆದ್ಮಿ ಪಕ್ಷಕ್ಕೆ ಅವಕಾಶ ಕೊಡಿ ಎಂದು ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಅಧಿಕಾರ ನಡೆಸಿವೆ. ಅವರ ಅಧಿಕಾರ ಸಂದರ್ಭದಲ್ಲಿ ಕೇವಲ ಭ್ರಷ್ಟಾಚಾರ ಹೆಚ್ಚಾಗಿದೆ. ಜೆಡಿಎಸ್ 10 ಪರ್ಸೆಂಟ್, ಕಾಂಗ್ರೆಸ್ 20 %, ಬಿಜೆಪಿ 40% ಹೀಗೆ ಭ್ರಷ್ಟಾಚಾರ ಹೆಚ್ಚು ಮಾಡಿದ್ದಾರೆ ಹೊರತು ಸಾರ್ವಜನಿಕರಿಗೆ ಸೌಲಭ್ಯ ನೀಡಿಲ್ಲ, ಅಭಿವೃದ್ಧಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಆಧ್ಯತೆ ಶಿಕ್ಷಣಕ್ಕೆ ನೀಡುವ ಒಂದು ಕನಸು ಹೊಂದಿದ್ದು, ದೆಹಲಿ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ತರುವ ಯೋಜನೆಯನ್ನು ಹಾಕಿಕೊಂಡಿದೆ. ಹಾಗಾಗಿ ಒಮ್ಮೆ ಅಧಿಕಾರ ಕೊಡಿ ಎಂಬ ನಿಟ್ಟಿನಲ್ಲಿ ಪ್ರಚಾರ ಮಾಡಿದರು.
![]() |
![]() |
![]() |
![]() |
![]() |
[ays_poll id=3]