ಇವರಿಗೆ ಮಕ್ಕಳಾಗೋದು ಕಷ್ಟವಂತೆ.! ಕೊರೋನಾ ಚಿಕಿತ್ಸೆ ಪುರುಷರ ವೀರ್ಯದ ಮೇಲೆ ಋಣಾತ್ಮಕ ಪರಿಣಾಮ
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ಕಳೆದ ಮೂರು ವರ್ಷದಿಂದ ಆರಂಭವಾದ ಆತಂಕದ ವಾತಾವರಣ ಇನ್ನು ತಿಳಿದುಕೊಂಡಿಲ್ಲ, ಅಂದು ಹುಟ್ಟಿದ ಕರೋನಾ ನಶಿಸಿ ಹೋಗುತ್ತಿದ್ದರು ಜನರಲ್ಲಿ ಭಯದ ವಾತಾವರಣ ಹುಟ್ಟಿಸುತ್ತಿದೆ. ಅಂತಹ ಭಯಾನಕ ಸತ್ಯವಂತನ್ನ ಇದೀಗ ಪಾಟ್ನಾದ ತಜ್ಞರು AIIMS ಸಂಶೋಧನೆ ಮೂಲಕ ಕಂಡುಹಿಡಿದಿದ್ದಾರೆ.
ಹೌದು AIIMS ಪಾಟ್ನಾದ ತಜ್ಞರು ನಡೆಸಿದ ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಹೊರಬಿದ್ದಿದ್ದು, ಕೊರೋನಾ ಸೋಂಕಿತರಿಗೆ ಮಕ್ಕಳಾಗುವುದು ತುಸು ಕಷ್ಟ ಎಂದು ಹೇಳಲಾಗಿದೆ. 19-45 ವರ್ಷ ವಯಸ್ಸಿನವರ ಮೇಲೆ ಅಕ್ಟೋಬರ್ 2020 ಮತ್ತು ಏಪ್ರಿಲ್ 2021ರ ನಡುವೆ ನಡೆಸಿದ ಸಂಶೋಧನೆಯಿಂದ ಈ ಮಾಹಿತಿ ಹೊರಬಿದ್ದಿದೆ. SARS-CoV-2 ವೈರಸ್‌ನ ಸೋಂಕು ಪುರುಷರಲ್ಲಿ ವೀರ್ಯದ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಗುಣಮಟ್ಟದ ಜತೆಗೆ ವೀರ್ಯಾಣು ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳಿದೆ.
![]() |
![]() |
![]() |
![]() |
![]() |