This is the title of the web page
This is the title of the web page
Local News

ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರ : ಅಮಾನತ್ತಿಗೆ ಒತ್ತಾಯ


ರಾಯಚೂರು : ಫುಡ್ ಕಿಟ್ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು,ಇದರಲ್ಲಿ ತಾಲೂಕಿನ ಶಾಸಕರು,ಹಿಂದಿನ ಜಿಲ್ಲಾಧಿಕಾರಿ,ಹಿಂದಿನ ದೇವದುರ್ಗ ತಹಶೀಲ್ದಾರ್, ಜಾಲಹಳ್ಳಿ ಕಂದಾಯ ನಿರೀಕ್ಷಕ,ಪಿಡಿಓ ಇವರೆಲ್ಲರು ಅವ್ಯವಹಾರದಲ್ಲಿ ಭಾಗಿಯಾಗಿದಿದ್ದಾರೆ ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಳ್ಳಪ್ಪ ಅಮರಾಪುರ ಒತ್ತಾಯಿಸಿದರು.

ಲಾಕ್ ಡೌನ್ ಸಮಯದಲ್ಲಿ ದೇವದುರ್ಗ ತಾಲೂಕಿಗೆ ಬಿಡುಗಡೆಯಾದ ಫುಡ್ ಕಿಟ್ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದ ಅವರು, ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ರೂ.49.80 ಲಕ್ಷ ಹಣ ಬಿಡುಗಡೆಯಾಗಿದ್ದು, ಅದರಲ್ಲಿ ರೂ.35,55 ಲಕ್ಷ ರೂ ಪಾವತಿಸಿ ಉಮಾ ಟ್ರೇಡಿಂಗ್ ಕಂಪನಿಯಿಂದ 5 ಸಾವಿರ ಫುಡ್ ಕಿಟ್ ಗಳನ್ನು ಖರಿಧಿಸಲಾಯಿತು. ದೇವದುರ್ಗ ತಾಲೂಕಿಗೆ 2500 ಫುಡ್ ಕಿಟ್ ಗಳನ್ನು ಕೊಡಲಾಗಿದೆ. ದೇವದುರ್ಗ ತಾಲೂಕಿನಲ್ಲಿ ಬರುವ 184 ಹಳ್ಳಿಗಳಲ್ಲಿ ವಾಸಿಸುವ ನಿರ್ಗತಿಕರಿಗೆ , ಬಡವರಿಗೆ, ಕೂಲಿ ಕಾರರಿಗೆ,ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಹಾಗೂ ಇತರೆ ಸಂಕಷ್ಟದಲ್ಲಿರುವ ಅರ್ಹ ಫಲಾನುಭವಿಗಳಿಗೆ 2500 ಫುಡ್ ಕಿಟ್ ಗಳನ್ನು ಬಿಡುಗಡೆ ಮಾಡಲಾಗಿದೆ.

ಬಿಡುಗಡೆಯಾದ ಫುಡ್ ಕಿಟ್ ಗಳನ್ನು ಸರ್ಕಾರಿ ಗೋದಾಮಿನಲ್ಲಿ ಸಂಗ್ರಹಿಸಬೇಕಾದ ಫುಡ್ ಕಿಟ್ ಗಳನ್ನು ತಹಸೀಲ್ದಾರ್ ಕಾರ್ಯಾಲಯದ ಕಚೇರಿಯಲ್ಲಿ ಸಂಗ್ರಹಿಸಲಾಗಿದೆ. ಸಂಗ್ರಹಿಸಲಾದ ಫುಡ್ ಕಿಟ್ ಗಳನ್ನು 184 ದಿನಗಳು ಆದ ಮೇಲೆ ಫುಡ್ ಕಿಟ್ ಗಳನ್ನು ಹಂಚಲಾಗಿದೆ ಎಂದು ದೂರಿದರು. ಅಂದಿನ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ದೇವದುರ್ಗ ತಾಲೂಕಿಗೆ 2500 ಫುಡ್ ಕಿಟ್ ಕೊಡುವ ಸಮಯದಲ್ಲಿ ದೇವದುರ್ಗ ಶಾಸಕರ ನಿರ್ದೇಶನದಂತೆ 2500 ಫುಡ್ ಕಿಟ್ ಗಳನ್ನು ಕೊಟ್ಟು ಕರ್ತವ್ಯ ಲೋಪವೆಸಗಿದ್ದಾರೆ ಎಂದು ಅವರು, ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತ್ತು ಮಾಡಿ ಶಾಸಕ ಕೆ.ಶಿವನಗೌಡ ನಾಯಕ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.


[ays_poll id=3]