
ಮುದಗಲ್ : ಪಟ್ಟಣದ ಶ್ರೀ ಮಲ್ಲಿಕಾರ್ಜುನ ಫೋಟೋ ಸ್ಟುಡಿಯೋ ಆಪ್ ಬಿಡುಗಡೆ ಮಾಡುವ ಮೂಲಕ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಮನೆಯಲ್ಲೇ ಕುಳಿತು ಕಾರ್ಯಕ್ರಮಗಳ ಈ -ಆಲ್ಬಮ್ ಪಡೆಯಬಹುದಾಗಿದೆ.
ಪಟ್ಟಣದ ಭಾರತ್ ಕಲ್ಯಾಣ ಮಂಟಪದಲ್ಲಿ ನಡೆದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಮಹಾಂತ ಸ್ವಾಮೀಜಿ ರವರು ಮಲ್ಲಿಕಾರ್ಜುನ ಸ್ಟುಡಿಯೋ ಹಾಗೂ ಭಾರತ್ ಕಲ್ಯಾಣ ಮಂಟಪ ಇವರ ಸಹಯೋಗದಲ್ಲಿ ರೂಪಗೊಂಡ ಶ್ರೀ ಮಲ್ಲಿಕಾರ್ಜುನ ಸ್ಟುಡಿಯೋ ಆಪ್ ಬಿಡುಗಡೆ ಮಾಡಿದರು.
ಪ್ಲೇ ಸ್ಟೋರ್ ನಲ್ಲಿ ಮಲ್ಲಿಕಾರ್ಜುನ ಸ್ಟುಡಿಯೋ ಆಪ್ ಲಭ್ಯವಿದ್ದು, ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ಸ್ಟುಡಿಯೋ ಆಪ್ ನಿಂದ ಗ್ರಾಹಕರು ಕುಳಿತಲ್ಲೇ ತಮ್ಮ ಕಾರ್ಯಕ್ರಮಗಳ ಫೋಟೋ ಸೆಲೆಕ್ಷನ್ ಮಾಡಬಹುದು ಹಾಗೂ ಕಾರ್ಯಕ್ರಮಗಳ ಲೈವ್ ನಲ್ಲಿಯೇ ಫೋಟೋ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಇದರಿಂದ ಗ್ರಾಹಕರಿಗೆ ಸಮಯ ಉಳಿತಾಯವಾಗಲಿದೆ ಹಾಗೂ ಶೀಘ್ರದಲ್ಲಿ ತಮ್ಮ ಕಾರ್ಯಕ್ರಮಗಳ ಫೋಟೋಗಳು ಹಾಗೂ ಈ -ಆಲ್ಬಮ್ ದೊರೆಯಲಿವೆ ಇದರ ಪ್ರಯೋಜನವನ್ನ ನಮ್ಮ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ
![]() |
![]() |
![]() |
![]() |
![]() |
[ays_poll id=3]