This is the title of the web page
This is the title of the web page
Crime NewsState NewsVideo News

ಅಕ್ರಮ ಮರಳು ಸಾಗಾಟ : ಶಾಸಕಿ ಪುತ್ರನಿಂದ ಪೇದೆ ಮೇಲೆ ಹಲ್ಲೆ ಆರೋಪ..?


K2kannadanews.in

assaulted constable ರಾಯಚೂರು : ಪೊಲೀಸ್ ಪೇದೆ ಮೇಲೆ ಶಾಸಕಿಯ ಪುತ್ರನ (MLA son) ದರ್ಪ ಮೆರೆದಿದ್ದಾರೆ ಎಂಬ ವೀಡಿಯೋ ವೈರಲ್ ಆಗಿದ್ದು, ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಆರಕ್ಷಕರಿಗೆ ರಕ್ಷಣೆ (No security for police) ಇಲ್ಲದಂತಾಯಿತಾ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.

ಹೌದು ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ಪಟ್ಟಣದಲ್ಲಿನ ಪ್ರವಾಸಿ ಮಂದಿರಕ್ಕೆ (IB) ಪೇದೆನನ್ನು‌ ಕರೆಯಿಸಿ ಮನಸ್ಸೋ ಇಚ್ಛೆ ಥಳಿಸಿದ ಆರೋಪ ಮಾಡಲಾಗಿದೆ. ದೇವದುರ್ಗ ಶಾಸಕಿ ಪುತ್ರ ಸೇರಿದಂತೆ ಸಂಗಡಿಗರಿಂದ (Friends) ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. ಅಕ್ರಮ‌ವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ (Tractor) ತಡೆದಿದ್ದಕ್ಕೆ ಐಬಿಗೆ ಕರೆಯಿಸಿ‌ ಶಾಸಕಿ ಕರೆಯಮ್ಮ ಜೀ ನಾಯಕ ಅವರ ಪುತ್ರ ಸಂತೋಷ್ (Santhosh), ಸಹೋದರ ತಿಮ್ಮಪ್ಪ ( Timmappa), ತಳವಾರ ದೊಡ್ಡಿ ಇಬ್ಬರು ಯುವಕರಿಂದ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕೇವಲ ಒಂದು ಟ್ರ್ಯಾಕ್ಟರ್ ನಿಲ್ಲಿಸಿದ್ದಕ್ಕೆ, ದೇವದುರ್ಗ ಪ್ರವಾಸಿ ಮಂದಿರಕ್ಕೆ ಪೇದೆನನ್ನು‌ ಕರೆಯಿಸಿ ಮನಸ್ಸೋ ಇಚ್ಛೆ ಥಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹಲ್ಲೆ ನಂತರ ಮಾಡಲಾದ ವೀಡಿಯೋ (Video) ಎಂಬುದು ತಿಳಿಯುತ್ತಿದ್ದು, ಪ್ರವಾಸಿ ಮಂದಿರದಲ್ಲಿ ಬಿಕ್ಕಿ ಬಿಕ್ಕಿ ಅತ್ತಿರುವ (Cry) ಪೇದೆ ಹಲ್ಲೆ ಮಾಡಿದ್ದಕ್ಕೆ ಕಾರಣ ಕೊಡಿ ಎನ್ನುತ್ತಿದ್ದಾರೆ. ಗಾಯಾಳು ಪಿಸಿ ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ (Hospital) ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿರುವ ಕಾನ್ಸಟೇಬಲ್.


[ays_poll id=3]